Urdu   /   English   /   Nawayathi

ಅಹಮದಾಬಾದ್‌ಗೆ ಕರ್ಣವತಿ ಹೆಸರಿಡಲು ಸಿದ್ಧ: ಗುಜರಾತ್ ಸರ್ಕಾರ

share with us

ಅಹಮದಾಬಾದ್: 07 ನವೆಂಬರ್ (ಫಿಕ್ರೋಖಬರ್ ಸುದ್ದಿ) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ, ಗುಜರಾತಿನ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು  ಹೆಸರು ಬದಲಾವಣೆ ಮಾಡಲು ಸಿದ್ಧವಿರುವುದಾಗಿ ಗುಜರಾತ್ ಸರ್ಕಾರ ಹೇಳಿದೆ. ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್,   ಕಾನೂನು ಅಡಚಣೆಗಳು ಎದುರಾದರೆ  ಅಗತ್ಯವಾದ ಬೆಂಬಲ ಪಡೆದು ಅಹಮದಾಬಾದ್ ನಗರದ ಹೆಸರನ್ನು  ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಅಹಮದಾಬಾದಿಗೆ ಕರ್ಣವತಿ ಎಂದು ಮರುನಾಮಕರಣ ಮಾಡಬೇಕೆಂದು ಜನರು ಬಯಸುತ್ತಿದ್ದಾರೆ. ಒಂದು ವೇಳೆ ಎಲ್ಲಾ ಕಾನೂನು ತೂಡಕುಗಳು ನಿವಾರಣೆಯಾದರೆ ಹೆಸರು ಬದಲಾವಣೆ ಮಾಡಲು ಸದಾ ಸಿದ್ದರಿದ್ದೇವೆ ಎಂದರು.

ಕ್ರಿ. ಶ. 11 ನೇ ಶತಮಾನದಲ್ಲಿ ಚಾಲುಕ್ಯ ದೊರೆ  ಕರ್ಣ ಸಬರಿಮತಿ ನದಿ ದಂಡೆಯ ಮೇಲೆ ಕರ್ಣವತಿ ನಗರವನ್ನು ಸ್ಥಾಪಿಸಿದ್ದರು.  ಆದರೆ, ಸುಲ್ತಾನ ಅಹಮದ್ ಶಾ ಕ್ರಿ,ಶ. 1411ರಲ್ಲಿ ಕರ್ಣವತಿ ನಗರದ ಹೆಸರು ಬದಲಾಯಿಸಿ ಅಹಮದಾಬಾದ್ ಎಂದು  ಮರುನಾಮಕರಣ ಮಾಡಿದ್ದರು.

ಅಹಮದಾಬಾದ್ ನಗರದ ಹೆಸರು ಬದಲಾವಣೆ ಮಾಡುವ  ವಿಚಾರ ಆಡಳಿತ ರೂಢ ಬಿಜೆಪಿ ಸರ್ಕಾರದ  ರಾಜಕೀಯ ಗಿಮ್ಮಿಕ್ ಎಂದು ಗುಜರಾತ್  ಕಾಂಗ್ರೆಸ್ ಘಟಕದ ವಕ್ತಾರ ಮನೀಷ್ ದೋಷಿ ಆರೋಪಿಸಿದ್ದಾರೆ. ಹಿಂದೂಗಳ ಮತ  ಪಡೆಯುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಅಹಮದಾಬಾದ್ ನಗರವನ್ನು ಕರ್ಣವತಿ ನಗರ ಎಂದು ಮರು ನಾಮಕರಣ ಮಾಡುವ ನಾಟಕವಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا