Urdu   /   English   /   Nawayathi

ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ 200 ವರ್ಷದಿಂದಲೂ ದೀಪಾವಳಿ ಆಚರಣೆಗೆ ನಿರ್ಬಂಧ!

share with us

ಶ್ರೀಕಾಕುಳಂ: 07 ನವೆಂಬರ್ (ಫಿಕ್ರೋಖಬರ್ ಸುದ್ದಿ) ಆಂಧ್ರಪ್ರದೇಶದ ರನಸ್ಥಳಂ ಮಂಡಲದ ಪೊನ್ನಾನಾಪಲೇಮ್ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದಲೂ  ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿಲ್ಲ. ನಾಗುಲಾ ಚೌತಿ ದಿನದಿಂದ ಹಾವು ಕಚ್ಚಿ ಮಗುವೊಂದು ಮೃತಪಟ್ಟಿದ್ದರಿಂದ ಹಾಗೂ ಅದೇ ದಿನ ಎರಡು ಎತ್ತುಗಳು ಕೂಡಾ ಸಾವನ್ನಪ್ಪಿದ್ದರಿಂದ  ಗ್ರಾಮದ ಮುಖ್ಯಸ್ಥರು  200 ವರ್ಷಗಳ ಹಿಂದೆ ದೀಪಾವಳಿ ಹಬ್ಬ ಆಚರಿಸದಂತೆ ನಿರ್ಬಂಧ ಹೇರಿದ್ದು,ಅದು ಈಗಲೂ ಕೂಡಾ ಮುಂದುವರೆದಿದೆ.

ಗ್ರಾಮದ ಹಿರಿಯರು  ನೀಡಿದ  ತೀರ್ಪಿಗೆ ಗೌರವ ನೀಡುವ ನಿಟ್ಟಿನಲ್ಲಿ  ಈ ಗ್ರಾಮದ ಜನರು ದೀಪಾವಳಿ ಆಚರಿಸುತ್ತಿಲ್ಲ. ಹುಡುಗಿ ನೋಡಲು ಈ ಗ್ರಾಮಕ್ಕೆ ಹೆಜ್ಜೆ ಇಡುವವರು ಕೂಡಾ ದೀಪಾವಳಿ  ಮರೆತೆ ಬಿಡಬೇಕು, ಮದುವೆಯಾಗಿ ತನ್ನ ಗಂಡನ ಮನೆ ಸೇರಿದ ಹೆಣ್ಣು ಮಕ್ಕಳು ಅಲ್ಲಿ ದೀಪಾವಳಿ ಆಚರಿಸುತ್ತಾರೆ.

ಸುಶಿಕ್ಷಿತ ಯುವಕರು ಈ ಸಂಪ್ರದಾಯವನ್ನು ಮುರಿಯಲು ಪ್ರಯತ್ನಿಸಿದ್ದರೂ ಗ್ರಾಮದ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ. 12 ವರ್ಷದ ಹುಡುಗಿಯಿಂದಲೂ   ನೋಡುತ್ತಿದ್ದೇನೆ ಈ ಗ್ರಾಮದಲ್ಲಿ ದೀಪಾವಳಿ ಆಚರಿಸುವುದಿಲ್ಲ  ಎಂದು  70 ವರ್ಷದ ಪೊನ್ನಣ ನಾರಾಯಣಮ್ಮ ಹೇಳುತ್ತಾರೆ.

ಈ ಸಂಪ್ರದಾಯ ಉಲ್ಲಂಘಿಸಿ 12 ವರ್ಷದ ಹಿಂದೆ ದೀಪಾವಳಿ ಆಚರಿಸಿದ ಕೆಲ ವರ್ಷದ ಬಳಿಕ ನನ್ನ ಮಗ ಆಕಸ್ಮಿಕವಾಗಿ ಮೃತಪಟ್ಟಿದಕ್ಕೆ ದೀಪಾವಳಿ ಹಬ್ಬ ಆಚರಿಸಿದ್ದೇ ಕಾರಣ ಎಂದು ವದಂತಿ ಹರಡಿಸಲಾಯಿತು ಎಂದು ಶಾಲೆಯೊಂದರ ನಿವೃತ್ತ ಹೆಡ್ ಮಾಸ್ಟರ್ ಪಿಎನ್ ನಾಯ್ಡು ಹೇಳುತ್ತಾರೆ.

ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರ ಮನವೊಲಿಕೆ ಹೊರತಾಗಿಯೂ ಗ್ರಾಮದ ಜನರು ದೀಪಾವಳಿ ಹಾಗೂ ನಾಗುಲಾ ಚೌತಿ ಹಬ್ಬವನ್ನು ತಿರಸ್ಕರಿಸುತ್ತಾ ಬಂದಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا