Urdu   /   English   /   Nawayathi

ಪಾಕ್ ಜೊತೆ ರಕ್ಷಣಾ ಸಹಕಾರ ವೃದ್ಧಿಗೆ ಮುಂದಾದ ಚೀನಾ: ಭಾರತದೊಂದಿಗಿನ ವಿವಾದದಲ್ಲಿ ಪಾಕ್ ಪರ ನಿಂತ ನೆರೆ ರಾಷ್ಟ್ರ!

share with us

ಬೀಜಿಂಗ್: 06 ನವೆಂಬರ್ (ಫಿಕ್ರೋಖಬರ್ ಸುದ್ದಿ) ಚೀನಾ ಹಾಗೂ ಪಾಕಿಸ್ತಾನ ಪರಸ್ಪರ ರಕ್ಷಣಾ ಸಹಕಾರವನ್ನು ವೃದ್ಧಿಸುವುದಕ್ಕಾಗಿ ನ.04 ರಂದು ಒಪ್ಪಂದ ಮಾಡಿಕೊಂಡಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈಗಾಗಲೇ ಚೀನಾ ಪಾಕಿಸ್ತಾನಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಈ ಬೆನ್ನಲ್ಲೇ ಚೀನಾ- ಪಾಕಿಸ್ತಾನ ರಕ್ಷಣಾ ಸಹಕಾರವನ್ನೂ ವೃದ್ಧಿಸುವ ತೀರ್ಮಾನಕ್ಕೆ ಉಭಯ ನಾಯಕರೂ ಬಂದಿದ್ದಾರೆ. 

ದ್ವಿಪಕ್ಷೀಯ ಮಾತುಕತೆ ವೇಳೆ, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಪಾಕಿಸ್ತಾನದ ಪ್ರಯತ್ನಗಳನ್ನು ಚೀನಾ ನಾಯಕತ್ವ ಮೆಚ್ಚಿದೆ. ಇದೇ ವೇಳೆ ಸಿಪಿಇಸಿ ಕುರಿತಾಗಿ ನಡೆಯುತ್ತಿರುವ ನಕಾರಾತ್ಮಕ ಪ್ರಚಾರವನ್ನೂ ಉಭಯ ನಾಯಕರೂ ಖಂಡಿಸಿದ್ದು, ಯೋಜನೆಗೆ ಎದುರಾಗುವ ಎಲ್ಲಾ ರೀತಿಯ  ಅಡೆತಡೆಗಳನ್ನೂ ಎದುರಿಸುವುದಾಗಿ ಚೀನಾ-ಪಾಕ್ ಪ್ರಧಾನಿಗಳು ಹೇಳಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا