Urdu   /   English   /   Nawayathi

ಗಸ್ತು ಮುಗಿಸಿದ ಐಎನ್ಎಸ್ ಅರಿಹಂತ್, ಇನ್ನು ಮುಂದೆ ಪರಮಾಣು ಬೆದರಿಕೆ ಇಲ್ಲ ಎಂದ ಪ್ರಧಾನಿ

share with us

ನವದೆಹಲಿ: 05 ನವೆಂಬರ್ (ಫಿಕ್ರೋಖಬರ್ ಸುದ್ದಿ) ತನ್ನ ಪ್ರಥಮ ಭೀತಿಕಾರಕ ಗಸ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ  ಶ್ಲಾಘಿಸಿದ್ದಾರೆ. ದೇಶದ ರಕ್ಷಣೆಯಲ್ಲಿ, ವಿರೋಧಿಗಳನ್ನ ನಾಶ ಮಾಡುವ ಶಕ್ತಿಶಾಲಿ ಐಎನ್ಎಸ್ ಅರಿಹಂತ್ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ವಾಪಸ್​ ಬಂದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದ ರಕ್ಷಣೆಗೆ ಈ ನೌಕೆ ದೇಶದ ಆಸ್ತಿ ಎಂದರು.

ನಮ್ಮ ರಾಷ್ಟ್ರದ ರಕ್ಷಣೆ ಅಥವಾ ಭದ್ರತೆಯನ್ನ ಹೆಚ್ಚು ಮಾಡುವ ಪ್ರಕ್ರಿಯೆಯಲ್ಲಿ ಐಎನ್​ಎಸ್​ ಅರಿಹಂತ್ ಮೊದಲ ಹೆಜ್ಜೆಯಾಗಿದೆ.  ಅರಿಹಂತ್ ಗಸ್ತು ಪೂರ್ಣಗೊಳಿಸುವ ಮೂಲಕ ನಮ್ಮ ರಾಷ್ಟ್ರದ ವೈರಿಗಳಿಗೆ ಬಹಿರಂಗ ಸವಾಲು ಹಾಕಿದೆ ಎಂದು ಹೇಳಿದರು.

ಇನ್ನು ಮುಂದೆ ಯಾರೂ ನಮಗೆ ಪರಮಾಣು ಬೆದರಿಕೆ ಹಾಕುವುದಿಲ್ಲ. ಪರಮಾಣು ಬಾಂಬ್​ ಹಾಕುವ ಬೆದರಿಕೆ ಹಾಕುವವರಿಗೆ ಅರಿಹಂತ್​ ಹಂತ ಸ್ಪಷ್ಟ ಉತ್ತರವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ದೀಪಾವಳಿಗೂ ಮುನ್ನ ಈ ಸಾಧನೆ ಮಾಡಿದ ಭಾರತೀಯ ನೌಕಾಪಡೆಯನ್ನು ಧನ್‌ತೇರಾ ಸ್ಪೆಷಲ್‌ ಎಂದು ವರ್ಣಿಸಿರುವ ಪ್ರಧಾನಿ ಮೋದಿ, "ಇದು ಭಾರತದ ಹೆಮ್ಮೆ, ಇದರ ಯಶಸ್ಸಿಗೆ ಕಾರಣರಾದವರಿಗೆಲ್ಲ ನನ್ನ ಅಭಿನಂದನೆಗಳು. ಇತಿಹಾಸದಲ್ಲಿ ಇದು ಸದಾ ಸ್ಮರಣೀಯವಾಗಿರುತ್ತದೆ' ಎಂದು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا