Urdu   /   English   /   Nawayathi

ಬಿಜೆಪಿ ಏಜೆಂಟರೇ ಇಲ್ಲದಂತೆ ಮಾಡಿದ ಎಲ್‌.ಚಂದ್ರಶೇಖರ್‌

share with us

ರಾಮನಗರ: 04 ನವೆಂಬರ್ (ಫಿಕ್ರೋಖಬರ್ ಸುದ್ದಿ) ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಣದಿಂದ ನಿವೃತ್ತಿಯಾದ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌, ಬಿಜೆಪಿಗೆ ಮತ್ತೂಂದು ಶಾಕ್‌ ನೀಡಿದ್ದು ಮತದಾನದ ದಿನ ವ್ಯಕ್ತವಾಯಿತು. ಮತಗಟ್ಟೆಗಳಲ್ಲಿ ಮತ್ತು ಮತ ಎಣಿಕೆಯ ದಿನ ಪಕ್ಷದ ಏಜೆಂಟರುಗಳೇ ಇಲ್ಲದಂತೆ ಮತ್ತೂಂದು ಹೊಡೆತ ನೀಡಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಷೇತ್ರವ್ಯಾಪ್ತಿಯ 277 ಮತಗಟ್ಟೆಗಳಲ್ಲೂ ಬಿಜೆಪಿ ಏಜೆಂಟರಿಗೆ ಪ್ರವೇಶವೇ ಇಲ್ಲದಂತೆ ಮಾಡಿದ್ದು ಬೆಳಕಿಗೆ ಬಂದಿದೆ. ನವೆಂಬರ್‌ 1ರ ಗುರುವಾರ ಬೆಳಗ್ಗೆ ತಾವು ಕಣದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ ಬೆನ್ನಲ್ಲೆ ಚುನಾವಣಾಧಿಕಾರಿಗಳಿಗೆ ನಮೂನೆ 9 ಸಲ್ಲಿಸಿ ತಮ್ಮ ಅಧಿಕೃತ ಏಜೆಂಟರಾಗಿದ್ದ ಬಿಜೆಪಿ ಮುಖಂಡ ಜಿ.ವಿ.ಪದ್ಮನಾಭ ಅವರನ್ನು ರದ್ದುಗೊಳಿಸಿದ್ದಾರೆ. ಹೀಗಾಗಿ ತಕ್ಷಣದಿಂದಲೇ ಅಧಿಕೃತ ಏಜೆಂಟರಾಗಿದ್ದ ಜಿ.ವಿ.ಪದ್ಮನಾಭ ಅವರ ಸಹಿ ಮಾನ್ಯತೆ ಕಳೆದುಕೊಂಡಿತ್ತು. ಜತೆಗೆ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಬಿಜೆಪಿ ಏಜೆಂಟರುಗಳ ನೇಮಕವೂ ಮಾನ್ಯತೆ ಕಳೆದುಕೊಂಡಂತಾಗಿದ್ದು, ಮತಗಟ್ಟೆಗಳಲ್ಲೂ ಬಿಜೆಪಿ ಏಜೆಂಟರು ಮತಗಟ್ಟೆಯನ್ನು ಪ್ರವೇಶಿಸಲು ಸಾಧ್ಯವೇ ಆಗಿಲ್ಲ. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಮೈತ್ರಿ ಪಕ್ಷದ ಏಜೆಂಟರು ಮಾತ್ರ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಇದರಿಂದಾಗಿ ನವೆಂಬರ್‌ 6ರಂದು ನಡೆಯಲಿರುವ ಮತ ಏಣಿಕೆಯ ದಿನವೂ ಬಿಜೆಪಿ ಏಜೆಂಟರು ಮತ ಏಣಿಕೆ ಕಾರ್ಯದಲ್ಲಿ ಭಾಗಿಯಾಗಲು ಅಡ್ಡಿಯಾಗಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا