Urdu   /   English   /   Nawayathi

ಹಿಮಪಾತ, ಭೂಕುಸಿತಕ್ಕೆ ಸಿಲುಕಿದ್ದ 300 ಜನರ ರಕ್ಷಣೆ

share with us

ಬನಿಹಲ್: 04 ನವೆಂಬರ್ (ಫಿಕ್ರೋಖಬರ್ ಸುದ್ದಿ) ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಜವಹರ್ ಸುರಂಗದ ಬಳಿ ಭಾರೀ ಹಿಮಪಾತ ಮತ್ತು ಭೂಕುಸಿತಗಳಿಂದ ಅಪಾಯಕ್ಕೆ ಸಿಲುಕಿದ್ದ ಭದ್ರತಾ ಸಿಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಜನರನ್ನು ಶನಿವಾರ ತಡರಾತ್ರಿ ರಕ್ಷಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಜಮ್ಮು-ಶ್ರೀನಗರದ ನಡುವೆ ಸಂಪರ್ಕ ಕಲ್ಪಿಸುವ 270 ಕಿಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತ ಮತ್ತು ಬಹು ಭೂಕುಸಿತಗಳಿಂದ ಮಾರ್ಗವು ಅಸುರಕ್ಷಿತವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎನ್‍ಎಚ್‍ನಲ್ಲಿ ಸಂಚಾರ ಬಂದ್ ಮಾಡಲಾಗಿದೆ ಎಂದು ಹರಿಯ ಪೊಲೀಸ್ ವರಿಷ್ಠಾಧಿಕಾರಿ (ರಾಮ್‍ಬನ್ ವಲಯ) ಅನಿತಾ ಶರ್ಮ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಪ್ರಕೃತಿ ವಿಕೋಪದಲ್ಲಿ 25ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸೇರಿದಂತೆ 300ಕ್ಕೂ ಅಧಿಕ ಪ್ರಯಾಣಿಕರು ಅಪಾಯಕ್ಕೆ ಸಿಲುಕಿದ್ದರು. ಸತತ ಕಾರ್ಯಾಚರಣೆ ಮೂಲಕ ಅವರನ್ನು ರಕ್ಷಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಮಾರ್ಗದ ಜವಹರ್ ಸುರಂಗದ ಬಳಿ ಅನೇಕ ಪ್ರಯಾಣಿಕರ ವಾಹನಗಳು ಹಿಮಪಾತಕ್ಕೆ ಸಿಲುಕಿವೆ ಎಂಬ ಮಾಹಿತಿ ಲಭಿಸಿದ ಕೂಡಲೇ ನಾವು ಕಾರ್ಯಾಚರಣೆ ನಡೆಸಿ ವೆರಿನಾಗ್ ಜಿಂಗ್ ಪ್ರದೇಶದಿಂದ 300ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆವು ಎಂದು ಅವರು ಹೇಳಿದ್ದಾರೆ. ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಸುರಕ್ಷಿತವಾಗಿ ಬನ್ನಿಹಲ್ ಪ್ರದೇಶಕ್ಕೆ ಕರೆತರಲಾಗಿದ್ದು, ಅವರಿಗೆ ಹೊಟೇಲ್‍ಗಳು, ಶೆಡ್‍ಗಳು, ಧಾರ್ಮಿಕ ಸ್ಥಳಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا