Urdu   /   English   /   Nawayathi

ನಾಳೆಯಿಂದ ಇರಾನ್‌ಗೆ ನಿರ್ಬಂಧದ ಸಂಕಷ್ಟ

share with us

ವಾಷಿಂಗ್ಟನ್‌: 04 ನವೆಂಬರ್ (ಫಿಕ್ರೋಖಬರ್ ಸುದ್ದಿ) ನವೆಂಬರ್‌ 5 ರಿಂದ ಇರಾನ್‌ಗೆ ಅಮೆರಿಕದ ನಿಷೇಧ ಭಾರಿ ಹೊಡೆತ ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇರಾನ್‌ನ ಭ್ರಷ್ಟ ಸರ್ಕಾರದ ವಿರುದ್ಧ ಅತ್ಯಂತ ಕಠಿಣ ನಿಷೇಧಗಳನ್ನು ಹೇರಲಾಗಿದೆ. ಎರಡು ವರ್ಷಗಳ ಹಿಂದೆ ಒಪ್ಪಂದವನ್ನು ಮುರಿಯುವಾಗ ಇದ್ದಂತೆ ಇರಾನ್‌ ಈಗಿಲ್ಲ. ನಿರ್ಬಂಧಗಳು ದೊಡ್ಡ ಪ್ರಮಾಣದಲ್ಲಿವೆ ಮತ್ತು ಇದು ಇರಾನ್‌ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ಅವರು ಹೇಳಿದ್ದಾರೆ.

ಬರಾಕ್‌ ಒಬಾಮ ಅಧ್ಯಕ್ಷರಾಗಿದ್ದಾಗ, ಅಣ್ವಸ್ತ್ರ ತಯಾರಿಕೆ ನಿಲ್ಲಿಸುವ ಒಪ್ಪಂದವನ್ನು ಇರಾನ್‌ ಮಾಡಿಕೊಂಡಿತ್ತು. ಇದಕ್ಕೆ ಪ್ರತಿ ಯಾಗಿ ಇರಾನ್‌ ಮೇಲೆ ನಿರ್ಬಂಧವನ್ನು ತೆರವುಗೊಳಿಸಿತ್ತು. ಈ ಒಪ್ಪಂದವು ಅಕ್ರಮ ಎಂದು ಟ್ರಂಪ್‌ ಹೇಳಿದ್ದು, ಕಳೆದ ಮೇಯಲ್ಲಿ ಒಪ್ಪಂದ ರದ್ದುಗೊಳಿಸಿದ್ದಾರೆ. ಈ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮೊದಲಿದ್ದ ನಿರ್ಬಂಧ ಗಳನ್ನು ಅಮೆರಿಕ ಪುನಃ ಜಾರಿಗೆ ತಂದಿದೆ. ಇರಾನ್‌ ಜೊತೆಗೆ ಅಮೆರಿಕ ಮಾತುಕತೆಗೆ ಸಿದ್ಧವಿದೆ. ಆದರೆ ಅಲ್ಲಿಯವರೆಗೂ ಈ ಕಠಿಣ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಟ್ರಂಪ್‌ ಹೇಳಿದ್ದಾರೆ.

ಅಮೆರಿಕದ ಘನತೆಗೆ ಕುಂದು ಟ್ರಂಪ್‌: ಅಮೆರಿಕದ ಘನತೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕುಂದು ಎಂಬುದಾದ ಇರಾನ್‌ ಪರ ಮೋತ್ಛ ನಾಯಕ ಅಯಾತುಲ್ಲಾ ಅಲಿ ಖಮನೈ ಹೇಳಿದ್ದಾರೆ. ಕಳೆದ 40 ವರ್ಷಗಳಲ್ಲಿ ಹಲವು ಬಾರಿ ಅಮೆರಿಕ ನಮ್ಮ ಮೇಲೆ ಹಲವು ರೀತಿಯ ಬಲಪ್ರಯೋಗ ನಡೆಸಿದೆ. ಆದರೆ ಎಲ್ಲ ಬಾರಿಯೂ ಅಮೆರಿಕವೇ ಸೋತಿದೆ ಎಂದಿದ್ದಾರೆ. ಈಗಲೂ ಟ್ರಂಪ್‌ ಪುನಃ ನಿರ್ಬಂಧಗಳನ್ನು ವಿಧಿಸುತ್ತಿದ್ದು, ಅಂತಿಮವಾಗಿ ಅವರೇ ಸೋಲಲಿದ್ದಾರೆ ಎಂದಿದ್ದಾರೆ.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا