Urdu   /   English   /   Nawayathi

ಅವಿಶ್ವಾಸ ನಿರ್ಣಯ: ಲಂಕಾ ತಮಿಳು ಪಕ್ಷದಿಂದ ಮಹಿಂದ ರಾಜಪಕ್ಸೆ ವಿರುದ್ಧ ಮತ

share with us

ಕೊಲಂಬೊ: 04 ನವೆಂಬರ್ (ಫಿಕ್ರೋಖಬರ್ ಸುದ್ದಿ) ಶ್ರೀಲಂಕಾ ನೂತನ ಪ್ರಧಾನಿ ಮಹಿಂದ ರಾಜಪಕ್ಸೆ ಅವರ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಾನು ಬೆಂಬಲಿಸುವುದಾಗಿ ಲಂಕಾ ಪ್ರಮುಖ ತಮಿಳು ಪಕ್ಷ ತಮಿಳ್ ನ್ಯಾಷನಲ್ ಅಲೈಯನ್ಸ್ ಶನಿವಾರ ತಿಳಿಸಿದೆ. ಈ ಮಧ್ಯೆ ವಿಶ್ವಾಸಮತ ಸಾಬೀತುಪಡಿಸಲು ಬೇಕಾದ ಸಂಖ್ಯೆ ನನ್ನ ಬಳಿ ಇದೆ. ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಬೆಂಬಲಿತ ಕನಿಷ್ಠ ಆರು ಸದಸ್ಯರು ತಮಗೆ ಬೆಂಬಲ ಸೂಚಿಸಲಿದ್ದಾರೆ ಎಂದು ರಾಜಪಕ್ಷೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಪಕ್ಷೆ ನೇಮಕ ಅಸಂವಿಧಾನಿಕ ಎಂದಿರುವ ತಮಿಳು ನ್ಯಾಷನಲ್ ಅಲೈಯನ್ಸ್, ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಶುಕ್ರವಾರ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ವಿಕ್ರಮಸಿಂಘ ಅವರನ್ನು ಹುದ್ದೆಯಿಂದ ಕಿತ್ತು ಹಾಕಿ ಅವರ ಸ್ಥಾನದಲ್ಲಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರನ್ನು ಸ್ಥಾಪಿಸಿದ್ದರು. ಅಲ್ಲದೆ ನವೆಂಬರ್ 16ರ ವರೆಗೆ ಸಂಸತ್ತನ್ನು ಅಮಾನತುಗೊಳಿಸಿದ್ದರು. ನವೆಂಬರ್ 1ರಂದು ಅಮಾನತು ತೆರವುಗೊಳಿಸಿದ್ದು, ನೂತನ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ಮುಂದಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا