Urdu   /   English   /   Nawayathi

ತಮಿಳುನಾಡು : ವಿಜಯ್ 'ನನ್ಬನ್ ' ಶೈಲಿಯಲ್ಲಿ 80 ವರ್ಷದ ವೃದ್ದೆಯನ್ನು ರಕ್ಷಿಸಿದ ಯುವಕರು !

share with us

ಚೆನ್ನೈ: 03 ನವೆಂಬರ್ (ಫಿಕ್ರೋಖಬರ್ ಸುದ್ದಿ) 2012ರಲ್ಲಿ ತೆರೆ ಕಂಡ  ನಟ ವಿಜಯ್ ಅಭಿನಯದ 'ನನ್ಬನ್ ' ಚಿತ್ರದಿಂದ ಪ್ರೇರಣೆಗೊಂಡ  ಯುವಕರಿಬ್ಬರು ಇದೇ ರೀತಿಯಲ್ಲಿ ವೃದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ. 'ನನ್ಬನ್  ಚಿತ್ರದಲ್ಲಿ ಅಂಬ್ಯೂಲೆನ್ಸ್ ಬರುವುದು ತಡವಾದ ಕಾರಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿವಾ ತಂದೆಯನ್ನು  ಮತ್ತೊಬ್ಬ ಸ್ನೇಹಿತನ ನೆರವಿನಿಂದ ನಟ ವಿಜಯ್  ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ.

ಸ್ಕೂಟಿಯನ್ನು ಆಸ್ಪತ್ರೆಯೊಳಗೆ ನುಗ್ಗಿಸಿ  ಜಿವಾ ತಂದೆಯನ್ನು ದಾಖಲಿಸುತ್ತಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕುಳಿಯುತ್ತಾರೆ , ವಿಜಯ್ ಅವರ ಸೇವೆಗೆ ವೈದ್ಯರು ಹಾಗೂ ಸ್ನೇಹಿತರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತದೆ.

ಇದೇ ರೀತಿಯ ಘಟನೆಯೊಂದು ತಂಜಾವೂರು ಜಿಲ್ಲೆಯ ಪುಟ್ಟುಕೊಟೈ ಬಳಿಯ ಕಾಸಂಕುಲಂ ಬಳಿ   ನಡೆದಿರುವ ಬಗ್ಗೆ ವರದಿಯಾಗಿದೆ.

Abinaya chinnadurai@abianandhi05

Naban real # pattti reall

10:25 PM - Oct 31, 2018

ಕಾಸಾನ್ ಕುಲಂ ಬಳಿಯ ಶಿವ ದೇವಾಲಯದ ಬಳಿ ಚಿನ್ನಪೊನ್ನು ಎಂಬ 80 ವರ್ಷದ ವೃದ್ದೆ  ಕುಸಿದು ಬಿದ್ದಿದರು. ಅವರು ಯಾವುದೇ ಚಲನವಲನ ಮಾಡದೇ ಇದುದ್ದರಿಂದ  ಸತ್ತೇ ಹೋದರು ಎಂದು ಅಲ್ಲಿದ್ದ ಭಕ್ತರು ಭಾವಿಸಿದ್ದರು. ಆದರೆ, ಕೆಲ ಯುವಕರು  ಕ್ಷಣಾರ್ಧದಲ್ಲಿ ತಮ್ಮ ಬೈಕ್ ನಲ್ಲಿ  ಆ ವೃದ್ದ ಮಹಿಳೆಯನ್ನು ಕೂರಿಸಿಕೊಂಡು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಿ ಆಕೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا