Urdu   /   English   /   Nawayathi

ವಾರಣಾಸಿ ಮಾಲ್‍ನಲ್ಲಿ ಗನ್‍ಮ್ಯಾನ್ ದಾಳಿಗೆ ಇಬ್ಬರ ಬಲಿ

share with us

ವಾರಾಣಾಸಿ: 01 ನವೆಂಬರ್ (ಫಿಕ್ರೋಖಬರ್ ಸುದ್ದಿ) ದೇವಾಲಯಗಳ ನಗರಿ ವಾರಾಣಾಸಿಯಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಆಗಾಗ ಮರುಕಳಿಸುವಂಥ ಹಿಂಸಾಚಾರ ಘಟನೆ ನಡೆದಿದೆ. ಅಪರಿಚಿತನೊಬ್ಬ ಇಲ್ಲಿನ ಮಾಲ್ ಒಂದರ ಮೇಲೆ ದಾಳಿ ನಡೆಸಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ ಪರಣಾಮ ಇಬ್ಬರು ಹತರಾಗಿದ್ದಾರೆ.ನಿನ್ನೆ ರಾತ್ರಿ ಜೆಎಚ್‍ವಿ ಮಾಲ್‍ನಲ್ಲಿ ನಡೆದಸಿನಿಮೀಯ ಶೈಲಿಯ ದಾಳಿಯಲ್ಲಿ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಮೃತಪಟ್ಟವರು ಈ ಮಾಲ್‍ನಲ್ಲಿ ಬಟ್ಟೆ ಮಳಿಗೆಯನ್ನು ನಡೆಸುತ್ತಿದ್ದ ಮಾಲೀಕರು ಎಂದು ಪೊಲೀಸರು ಹೇಳಿದ್ದಾರೆ.
ಈ ದಾಳಿ ನಡೆಸಿ ಇಬ್ಬರನ್ನು ಹಂತಕ ಬಲಿ ತೆಗೆದುಕೊಂಡ ನಂತರ, ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿ ಹೋದರು. ಜನರ ಗುಂಪಿನ ಮಧ್ಯೆ ಗನ್‍ಮ್ಯಾನ್ ಸಹ ಪರಾರಿಯಾಗಿದ್ದಾನೆ. ಘಟನೆ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸ್
ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا