Urdu   /   English   /   Nawayathi

ಕೇರಳ: ಪ್ಲಾಸ್ಟಿಕ್ ಘಟಕದಲ್ಲಿ ಬೆಂಕಿ, ಕಾರ್ಮಿಕರು ಅಪಾಯದಿಂದ ಪಾರು

share with us

ತಿರುವನಂತಪುರ: 01 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮನ್ವಿಲ್ಲಾ ಸಮೀಪ ಪ್ಲಾಸ್ಟಿಕ್ ಉತ್ಪನ್ನ ಘಟಕದಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡವುಂಟಾಗಿದೆ. ಪ್ರಾಥಮಿಕ ವರದಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.  ಹತ್ತಿದ ಬೆಂಕಿಯನ್ನು ಆರಿಸಲು ಕನಿಷ್ಠ 30 ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ನಿನ್ನೆ ಸಾಯಂಕಾಲ 7 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ.
ಬೆಂಕಿ ಸ್ಪೋಟಗೊಂಡು ಹತ್ತಿ ಉರಿಯಲು ಆರಂಭಿಸಿದ ಕೂಡಲೇ ಪ್ಲಾಸ್ಟಿಕ್ ಘಟಕದೊಳಗಿದ್ದ ಕಾರ್ಮಿಕರು ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಘಟಕದಿಂದ ಹೊರಗೆ ದಟ್ಟ ಹೊಗೆ ಸೂಸುತ್ತಿತ್ತು. ಅಗ್ನಿ ಶಾಮಕ ಸಿಬ್ಬಂದಿಗೆ ಬೆಂಕಿ ಆರಿಸಲು 4 ಗಂಟೆ ಸಮಯ ಹಿಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೊಗೆ ಸೇವಿಸಿ ಉಸಿರಾಡಲು ಸಾಧ್ಯವಾಗದ ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಘಟಕದ ಹತ್ತಿರದಲ್ಲಿ ವಾಸಿಸುತ್ತಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

Sovi Vidyadharan@vidyadharansovi

 · 21h

Replying to @vidyadharansovi


Fire which broke out at 7.30 pm at plastic factory in still rages. Spread of fire to adjoining areas contained. However, plastic still burns inside factory. Firefighters unable to go near epicentre due to highly toxic fumes. @NewIndianXpress

Sovi Vidyadharan@vidyadharansovi


Situation at 00.02 hrs IST, Thursday. After four and a half hours, fire at plastic factory in in more or less under control. See video@NewIndianXpress pic.twitter.com/hdqhu0FOMs

12:04 AM - Nov 1, 2018

 ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا