Urdu   /   English   /   Nawayathi

ಹಫೀಜ್ ಸಯೀದ್ ನೇತೃತ್ವದ ಜೆಯುಡಿ, ಎಫ್ಐಎಫ್ ವಿರುದ್ಧ ಕಾನೂನು ತನ್ನಿ: ಪಾಕ್ ಗೆ ಅಮೆರಿಕ

share with us

ವಾಷಿಂಗ್ಟನ್: 01 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದಾವಾ(ಜೆಯುಡಿ) ಮತ್ತು ಫಲಾ-ಐ-ಇನ್ಸಾನಿಯಾತ್ ಫೌಂಡೇಶನ್ (ಎಫ್ಐಎಫ್) ವಿರುದ್ಧ ಕಾನೂನು ಜಾರಿಗೆ ತರುವಂತೆ ಅಮೆರಿಕ ಗುರುವಾರ ಪಾಕಿಸ್ತಾನಕ್ಕೆ ಸೂಚಿಸಿದೆ. 
ಇತ್ತೀಚಿಗೆ ಈ ಉಗ್ರ ಸಂಘಟನೆಗಳ ಮೇಲಿನ ಮೇಲಿನ ನಿಷೇಧ ತೆರವುಗೊಳಿಸಿದ್ದ ಪಾಕ್ ಕ್ರಮವನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಇದು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುವ ಇಸ್ಲಾಮಾಬಾದ್ ಬದ್ಧತೆಗೆ ವಿರುದ್ಧವಾಗಿದೆ ಎಂದಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯದ ಅಡಿಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ತನ್ನ ಬದ್ಧತೆಗಳನ್ನು ಪೂರೈಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಅಮೆರಿಕ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಜೆಯುಡಿ ಹಾಗೂ ಎಫ್ಐಎಫ್ ಸಂಘಟನೆಗಳನ್ನು ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ಆದರೆ ಪಾಕಿಸ್ತಾನ ಇತ್ತೀಚಿಗೆ ಈ ಎರಡು ಸಂಘಟನೆಗಳ ಮೇಲಿನ ನಿಷೇಧ ತೆರವುಗೊಳಿಸಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا