Urdu   /   English   /   Nawayathi

ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ ಕೋಟಿ ದಾಟಿದ ಜಿಎಸ್ ಟಿ ಆದಾಯ ಸಂಗ್ರಹ !

share with us

ನವ ದೆಹಲಿ:  01 ನವೆಂಬರ್ (ಫಿಕ್ರೋಖಬರ್ ಸುದ್ದಿ) ಕಳೆದ ತಿಂಗಳು  ಸರಕು ಮತ್ತು ಸೇವಾ ತೆರಿಗೆ- ಜಿಎಸ್ ಟಿ ಆದಾಯ ಸಂಗ್ರಹದಲ್ಲಿ 1 ಲಕ್ಷ ಕೋಟಿ  ದಾಟಿದೆ.ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೇ,  100, 710 ಕೋಟಿ  ಆದಾಯ ಜಿಎಸ್ ಟಿ ಸಂಗ್ರಹದಿಂದ ಬಂದಿದೆ. ಈ ಪೈಕಿ ಕೇಂದ್ರ ಜಿಎಸ್ ಟಿಯಿಂದ 16, 464 ಕೋಟಿ, ರಾಜ್ಯ ಜಿಎಸ್ ಟಿಯಿಂದ 22, 826 ಕೋಟಿ, ಐಜಿಎಸ್ ಟಿಯಿಂದ 53, ಸಾವಿರದ 419 ಕೋಟಿ , ಸೆಸ್ ನಿಂದ 800 ಸಾವಿರ ಕೋಟಿ ರೂ. ಆದಾಯ ಹರಿದುಬಂದಿದೆ.

ಸೆಪ್ಟೆಂಬರ್ ತಿಂಗಳಲ್ಲಿ 94 ಸಾವಿರದ 442 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ, ಅಕ್ಟೋಬರ್ ತಿಂಗಳಿನಲ್ಲಿ  ಶೇ, 6.64 ರಷ್ಟು ಹೆಚ್ಚಳವಾಗಿದೆ. ಕೇರಳದಿಂದ  ಶೇ44, ಜಾರ್ಖಂಡ್ ನಿಂದ ಶೇ.20, ರಾಜಸ್ತಾನದಿಂದ ಶೇ.14,  ಉತ್ತರ ಖಂಡ್ ನಿಂದ ಶೇ, 13 ಹಾಗೂ ಮಹಾರಾಷ್ಟ್ರದಿಂದ ಶೇ, 11 ರಷ್ಟು ಒಳಗೊಂಡಂತೆ ಒಟ್ಟಾರೇ, ರಾಜ್ಯಗಳಿಂದ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿಯಾಗಿದೆ.

ಸೆಪ್ಟೆಂಬರ್ ತಿಂಗಳಿನಿಂದ ಆಕ್ಟೋಬರ್ 31 ರವರೆಗೂ ಜಿಎಸ್ ಟಿ 3 ಬಿ ರಿಟರ್ನ್ಸ್ ನಿಂದ 67.45 ಲಕ್ಷ ಆದಾಯ ಸಂಗ್ರಹವಾಗಿದೆ.

ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ ಕೋಟಿ ಜಿಎಸ್ ಟಿ ಆದಾಯ ಸಂಗ್ರಹವಾಗಿದೆ. ಕಡಿಮೆ ದರ, ಕಡಿಮೆ ತಪ್ಪಿಸಿಕೊಳ್ಳುವಿಕೆ ಹಾಗೂ ಹೆಚ್ಚಿನ ಅನುಸರಣೆಯ  ಏಕ ತೆರಿಗೆ ಜಿಎಸ್ ಟಿ ಅನುಷ್ಠಾನದಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا