Urdu   /   English   /   Nawayathi

ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸಿ, ಕಚೇರಿಯಿಂದ ಹೊರನಡೆದ ಗೂಗಲ್‌ ನೌಕರರು

share with us

ಸ್ಯಾನ್‌ ಫ್ರಾನ್ಸಿಸ್ಕೋ: 01 ನವೆಂಬರ್ (ಫಿಕ್ರೋಖಬರ್ ಸುದ್ದಿ) ಕಚೇರಿಯಲ್ಲಿ ಲೈಂಗಿಕ ಕಿರುಕುಳ, ತಾರತಮ್ಯ ಮತ್ತು ಶೋಷಣೆಯನ್ನು ಖಂಡಿಸಿ ವಿಶ್ವದಾದ್ಯಂತ ನೂರಾರು ಗೂಗಲ್‌ ನೌಕರರು ಪ್ರತಿಭಟನೆ ನಡೆಸಿ, ಕಚೇರಿಯಿಂದ ಹೊರ ನಡೆದ ಅಪರೂಪದ ಘಟನೆ ಗುರುವಾರ ನಡೆದಿದೆ. ಕಂಪೆನಿಯ ಕಾರ್ಯನಿರ್ವಾಹಕರಿಂದ ನೌಕರರ ಮೇಲೆ ಅನಿರ್ಬಂಧಿತ ಅಧಿಕಾರ ಪ್ರಯೋಗ, ಜನಾಂಗೀಯತೆ, ಲೈಂಗಿಕ ಶೋಷಣೆಯನ್ನು ಖಂಡಿಸಿ ಗೂಗಲ್‌ ನೌಕರರು ಪ್ರತಿಭಟನೆ ನಡೆಸಿದರು. 

ಸಂಘಟಕರು ನಿನ್ನೆ ತಡವಾಗಿ ಹೊರಡಿಸಲಾಗಿರುವ ಹೇಳಿಕೆಯಲ್ಲಿ ಗೂಗಲ್‌ ಮಾತೃ ಸಂಸ್ಥೆಯಾಗಿರುವ Alphabet Inc. ಮುಖ್ಯಸ್ಥರನ್ನು ಭೇಟಿಯಾಗಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ನೌಕರ ಪ್ರತಿನಿಧಿಯೋರ್ವರನ್ನು ಸೇರಿಸಿಕೊಳ್ಳುವಂತೆ ಮತ್ತು ವೇತನ-ಸಮಾನತೆ ಅಂಕಿ ಅಂಶವನ್ನು ಆಂತರಿಕವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು. ಜತೆಗೆ ಕಾರ್ಯ ಸ್ಥಳದಲ್ಲಿನ ಕಿರುಕುಳ-ಸಂಬಂಧಿ ಪರಿಹಾರ ಕೋರಿಕೆ ಪ್ರಕರಣಗಳನ್ನು ನ್ಯಾಯೋಚಿತವಾಗಿ ಇತ್ಯರ್ಥಪಡಿಸುವ ದಿಶೆಯಲ್ಲಿನ ಮಾನವ ಸಂಪನ್ಮೂಲ ಉಪಕ್ರಮಗಳಿಗೆ ಬದಲಾವಣೆ ತರಬೇಕು ಎಂದು ವರದಿಗಳು ತಿಳಿಸಿವೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا