Urdu   /   English   /   Nawayathi

ಅಕ್ರಮ ಗಣಿಗಾರಿಕೆ, 1 ಕೋಟಿ ಕೂಡಾ ವಸೂಲಿ ಮಾಡಲಾಗಿಲ್ಲ; ರೆಡ್ಡಿ ಆಕ್ರೋಶ

share with us

ಹಾನಗಲ್: 29 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಕ್ರಮ ಗಣಿಗಾರಿಕೆಯಲ್ಲಿ ಒಂದು ಲಕ್ಷ ಕೋಟಿ ಲೂಟಿ ಮಾಡಿರುವುದಾಗಿ ಸಿದ್ದರಾಮಯ್ಯ ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಒಂದೂವರೆ ಲಕ್ಷ ಕೋಟಿ ಎಂದು ಆರೋಪಿಸಿದ್ದರು. ಆದರೆ ನನ್ನಿಂದ ಒಂದು ಕೋಟಿ ರೂಪಾಯಿ ಕೂಡಾ ವಸೂಲಿ ಮಾಡಲು ಸಾಧ್ಯವಾಗಿಲ್ಲ ಎಂದು ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಹಾನಗಲ್ ನ ಮೊಳಕಾಲ್ಮೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಸಹೋದರಿ ಶಾಂತಾ ಬಳ್ಳಾರಿಯಲ್ಲಿ ಚುನಾವಣಾ ಕಣದಲ್ಲಿದ್ದರೂ ಕೂಡಾ ಪ್ರಚಾರ ಮಾಡಲು ಆಗುತ್ತಿಲ್ಲ. ಕೋರ್ಟ್ ಆದೇಶದಿಂದ ಬಳ್ಳಾರಿಗೆ ಹೋಗುವಂತಿಲ್ಲ ಎಂದರು.

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ನನ್ನ ಅಮೂಲ್ಯವಾದ ನಾಲ್ಕು ವರ್ಷಗಳ ಕಾಲವನ್ನು ಜೈಲಿಗೆ ಕಳುಹಿಸಿ ಹಾಳು ಮಾಡಿದರು. ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಇದೆಯಾ? ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರೆಲ್ಲಾ ಈಗ ಸಿದ್ದರಾಮಯ್ಯನ ಜೊತೆ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪಪ್ರಚಾರ ಮಾಡುವ ಮೂಲಕ ನನ್ನ ರಾಜಕೀಯ ಭವಿಷ್ಯ ಹಾಳು ಮಾಡಿದ್ದಾರೆ. ಮಾನ ಮರ್ಯಾದೆ ಇಲ್ಲದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದು ಯಾಕೆ ಎಂದು ಸುಮ್ಮನಾದೆ. ಅದೇ ರೀತಿ ಜನಾರ್ದನ ರೆಡ್ಡಿ ಯಾರು ಎಂಬುದನ್ನು ಸಮ್ಮಿಶ್ರ ಸರ್ಕಾರಕ್ಕೆ ತೋರಿಸಿಕೊಡುತ್ತೇನೆ ಎಂದು ಹೇಳಿದರು.

ಪಾದಯಾತ್ರೆ ಮಾಡಿ ಸಿದ್ದು ಸಾಧಿಸಿದ್ದೇನು?

ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಸಿದ್ದರಾಮಯ್ಯನವರು ಸಾಧಿಸಿದ್ದೇನು? ನನ್ನಿಂದ ಎಷ್ಟು ಹಣ ವಸೂಲಿ ಮಾಡಿದ್ದಾರೆಂದು ಜನತೆಗೆ ತಿಳಿಸಬೇಕು. ನನ್ನಿಂದ ಒಂದು ಕೋಟಿ ರೂಪಾಯಿ ಹಣವನ್ನು ರಿಕವರಿ ಮಾಡಲು ಸಾಧ್ಯವಾಗಿಲ್ಲ ಎಂದರು.

ಭದ್ರತೆ ನೀಡುವಲ್ಲಿ ನಿರ್ಲಕ್ಷ್ಯ:

ನನಗೆ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದೆ. ಆದರೆ ನನ್ನ ಮನವಿಯನ್ನು ಸಮ್ಮಿಶ್ರ ಸರ್ಕಾರ ನಿರ್ಲಕ್ಷಿಸಿದೆ. ವಿಚಾರಣೆಗೆ ತೆರಳಿದ್ದ ವೇಳೆ ತೆಲಂಗಾಣ ಸರ್ಕಾರ ನನಗೆ ರಕ್ಷಣೆ ಕೊಟ್ಟಿದೆ. ರಾಜ್ಯ ಸರ್ಕಾರವೇ ಸೂಕ್ತ ಭದ್ರತೆ ಒದಗಿಸಲು ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ರೆಡ್ಡಿ ದೂರಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا