Urdu   /   English   /   Nawayathi

ಇಂಡೊನೇಷ್ಯಾ: ಪತನವಾದ ವಿಮಾನ ಚಲಾಯಿಸುತ್ತಿದ್ದ ಪೈಲಟ್ ಭಾರತೀಯ

share with us

ಜಕಾರ್ತ: 29 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಇಂಡೊನೇಷ್ಯಾದಲ್ಲಿ ಸಮುದ್ರಕ್ಕೆ ಪತನಗೊಂಡ ವಿಮಾನದ ಪೈಲಟ್ ಆಗಿದ್ದವರು ಭಾರತದ ಮೂಲದ ಭವ್ಯೆ ಸುನೆಜಾ ಎಂಬುದು ತಿಳಿದುಬಂದಿದೆ. ಇಂಡೊನೇಷ್ಯಾ ರಾಜಧಾನಿ ಜಕರ್ತದಿಂದ ಸೋಮವಾರ ಬೆಳಿಗ್ಗೆ ಸುಮಾತ್ರಾದ ಪಾಂಗ್‌ಕಲ್ ಪಿನಾಗ್‌ ದ್ವೀಪಕ್ಕೆ ಹೊರಟಿದ್ದ ‘ಲಯನ್ ಏರ್‌ ಜೆಟಿ610’ ವಿಮಾನ ಸಮುದ್ರಕ್ಕೆ ಪತನಗೊಂಡಿತ್ತು.

‘ಜಕಾರ್ತ ಬಳಿ ಲಯನ್ ಏರ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ದುರದೃಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ವಿಪತ್ತು ಕೇಂದ್ರದ ಜತೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯ ಸಹಕಾರ ನೀಡುತ್ತಿದೆ’ ಎಂದು ಜಕಾರ್ತದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

View image on TwitterView image on TwitterView image on TwitterView image on Twitter

India in Indonesia✔@IndianEmbJkt

Our deepest condolences on the tragic loss of lives in the Lion Air Plane crash, off the coast of Jakarta today. Most unfortunate that Indian Pilot Bhavye Suneja who was flying JT610 also lost his life...Embassy is in touch with Crisis Center and coordinating for all assistance.

1:14 PM - Oct 29, 2018

ಭವ್ಯೆ ಸುನೆಜಾ ಅವರು 2011ರಿಂದಲೂ ಲಯನ್ ಏರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮುನ್ನ ಎಮಿರೇಟ್ಸ್‌ನಲ್ಲಿ ಟ್ರೈನೀ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. ಸುನೆಜಾ ಅವರು 6,000 ಗಂಟೆ ವಿಮಾನ ಚಲಾಯಿಸಿದ್ದ ಅನುಭವ ಹೊಂದಿದ್ದು, ಅವರ ಸಹ ಪೈಲಟ್ ಆಗಿದ್ದ ಇಂಡೊನೇಷ್ಯಾದ ಹಾರ್ವಿನೊ 5,000ಕ್ಕೂ ಹೆಚ್ಚು ಗಂಟೆ ವಿಮಾನ ಚಲಾಯಿಸಿದ್ದ ಅನುಭವ ಹೊಂದಿದ್ದರು ಎಂದು ಲಯನ್ ಏರ್‌ ಸಂಸ್ಥೆ ತಿಳಿಸಿದೆ.

ದೆಹಲಿ ಮೂಲದವರಾದ ಸುನೆಜಾ ಮಯೂರ್‌ ವಿಹಾರ್‌ನ ಅಹಲ್ಕಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದ್ದರು.

ಜಕಾರ್ತದಿಂದ ಹೊರಟ ಲಯನ್ ಏರ್‌ ವಿಮಾನ ಟೇಕಾಫ್ ಆದ 13 ನಿಮಿಷಗಳ ಬಳಿಕ ಸಂಪರ್ಕ ಕಡಿದುಕೊಂಡಿತ್ತು. ದುರಂತದ ವೇಳೆ 189 ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا