Urdu   /   English   /   Nawayathi

ಜಕಾರ್ತಾ: ಟೇಕ್ ಆಫ್ ಆದ 13 ನಿಮಿಷಗಳ ಬಳಿಕ ನಾಪತ್ತೆಯಾದ ಇಂಡೋನೇಷ್ಯಾ ಲಯನ್ ಏರ್'ಲೈನ್ಸ್ ವಿಮಾನ

share with us

ಜಕಾರ್ತಾ: 29 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಹೊರಟ ಲಯನ್ ಏರ್'ಲೈನ್ಸ್ ಪ್ರಯಾಣಿಕ ವಿಮಾನವೊಂದು 13 ನಿಮಿಷಗಳ ಬಳಿಕ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ. 
ಈ ಕುರಿತಂತೆ ಏರ್'ನಾವ್ ಇಂಡೋನೇಷ್ಯಾ ವಕ್ತಾರ ಯೊಹನೀಸ್ ಹಪ್ಪಿ ಡೈಗ್ಲಾಸ್ ಅವರು ದೃಢಪಡಿಸಿದ್ದಾರೆ. ಲಯನ್ ಏರ್ ಜೆಟಿ610 ಸಂಪರ್ಕವನ್ನು ಕಡಿದುಕೊಂಡಿರುವುದು ನಿಜ ಎಂದು ಯೊಹನೀಸ್ ಹೇಳಿದ್ದಾರೆ. 

ವಿಮಾನ ನಾಪತ್ತೆಯಾಗಿರುವ ಮಾಹಿತಿಯನ್ನು ಈಗಾಗಲೇ ರಕ್ಷಣಾ ಪಡೆಗಳಿಗೆ ರವಾನಿಸಲಾಗಿದೆ. ಇಂದು ಬೆಳಿಗ್ಗೆ 6.33 ಬಳಿಕ ವಿಮಾನ ಸಂಪರ್ಕವನ್ನು ಕಡಿದುಕೊಂಡಿದೆ ಎಂದು ತಿಳಿಸಿದ್ದಾರೆ. 

ನಾಪತ್ತೆಯಾಗಿರುವ ವಿಮಾನಕ್ಕಾಗಿ ವಿಮಾನ ಸಚಿವಾಲಯದ ಅಧಿಕಾರಿಗಳು ತೀವ್ರ ಹುಡುಕಾಟ ಆರಂಭಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا