Urdu   /   English   /   Nawayathi

ದೇಶದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ನೆಲೆಸುವಲ್ಲಿ ಪೊಲೀಸರ ಪಾತ್ರ ಮಹತ್ವದು- ಪ್ರಧಾನಿ ಮೋದಿ

share with us

ದೆಹಲಿ:  21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ದೇಶಾದ್ಯಂತ ಇಂದು  ರಾಷ್ಟ್ರೀಯ ಪೊಲೀಸ್ ದಿನವನ್ನು ಆಚರಿಸಲಾಗುತ್ತಿದ್ದು, 1959ರಲ್ಲಿ ಲಡಾಖ್ ನಲ್ಲಿ    ಚೈನಾದ ಸೇನಾಪಡೆಗಳಿಂದ ಹುತಾತ್ಮರಾದ ಪೊಲೀಸರನ್ನು ಸ್ಮರಿಸಲಾಗುತ್ತಿದೆ. ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಹಿರಿಯ ಮುಖಂಡ ಎಲ್ , ಕೆ. ಅಡ್ವಾಣಿ, ಹುತಾತ್ಮ ಪೊಲೀಸರಿಗೆ  ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ  ನರೇಂದ್ರ ಮೋದಿ, ದೇಶದಲ್ಲಿ  ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ನೆಲೆಸಬೇಕಾದರೆ ಪೊಲೀಸ್ ಸೇವೆಯ ಪಾತ್ರ ಮಹತ್ವದಾಗಿದೆ. ಅಭದ್ರತೆ ಹಾಗೂ ಆತಂಕ ಸೃಷ್ಟಿಸುವಂತಹ ಪ್ರಯತ್ನಗಳಿಗೆ  ಅಂಕುಶ ಹಾಕುವಲ್ಲಿ  ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಜಮ್ಮು-ಕಾಶ್ಮೀರದಲ್ಲಿ  ಶಾಂತಿ, ಕಾನೂನು ನಿರ್ವಹಣೆ ಹಾಗೂ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಬೇಕಾದ ದಿನವಾಗಿದೆ. ನಕ್ಸಲ್ ಪೀಡಿತ  ಪ್ರದೇಶಗಳಲ್ಲಿ ಪೊಲೀಸರ ಸೇವೆ ಮಹತ್ತವಾಗಿದ್ದು, ನಕ್ಸಲ್ ಬಾದಿತ ಜಿಲ್ಲೆಗಳಲ್ಲಿನ ಯುವಕರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪ್ರಧಾನಿ ಕರೆ ನೀಡಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا