Urdu   /   English   /   Nawayathi

ಆಫ್ಗಾನಿಸ್ತಾನ ಚುನಾವಣೆ: ಹಿಂಸಾಚಾರದ ನಡುವೆಯೇ ಮತದಾನ

share with us

ಕಾಬುಲ್‌: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಫ್ಗಾನಿಸ್ತಾನದಲ್ಲಿ ಎಂಟು ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ತಾಲಿಬಾನ್‌ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ವಿವಿಧ ಮತಗಟ್ಟೆಗಳ ಬಳಿ ಬಾಂಬ್‌ ಸ್ಫೋಟಗೊಂಡಿದ್ದು, ಮೂವರು ಸಾವಿಗೀಡಾಗಿದ್ದರೆ 37 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಚುನಾವಣೆ ಬಹಿಷ್ಕರಿಸದಿದ್ದರೆ ಸಾವಿಗೀಡಾಗಬೇಕಾಗುತ್ತದೆ ಎಂಬ ತಾಲಿಬಾನ್‌ ಉಗ್ರರ ಎಚ್ಚರಿಕೆ ನಡುವೆಯೂ  ಮತದಾರರು ಗಂಟೆಗಟ್ಟಲೇ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.

ತಾಂತ್ರಿಕ ಕಾರಣ ಹಾಗೂ ಸಿಬ್ಬಂದಿ ಕೊರತೆಯ ಪರಿಣಾಮ ಹಲವು ಮತಗಟ್ಟೆಗಳನ್ನು ಮುಚ್ಚಲಾಗಿತ್ತು. ‘ತಾಂತ್ರಿಕ ಕಾರಣದಿಂದಾಗಿ ಮಧ್ಯಾಹ್ನ 1 ಗಂಟೆಯವರೆಗೂ ತೆರೆಯದಿದ್ದ ಮತಗಟ್ಟೆಗಳನ್ನು ಭಾನುವಾರ ಮತ್ತೆ ತೆರೆಯಲಾಗುವುದು’ ಎಂದು ಸ್ವತಂತ್ರ ಚುನಾವಣಾ ಆಯೋಗ (ಐಇಸಿ) ಹೇಳಿದೆ.

ಒಂದು ತಿಂಗಳಿನಿಂದಲೂ ಅಫ್ಗಾನಿಸ್ತಾನದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈವರೆಗೆ 100ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸಂಸತ್‌ ಚುನಾವಣೆಗೆ ಸ್ಪರ್ಧಿಸಿದ್ದ 2,500 ಅಭ್ಯರ್ಥಿಗಳ ಪೈಕಿ 10 ಅಭ್ಯರ್ಥಿಗಳ ಹತ್ಯೆಯಾಗಿದೆ. 

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا