Urdu   /   English   /   Nawayathi

ಆಫ್ಘನ್ ಸಂಸದೀಯ ಚುನಾವಣೆ ವೇಳೆ ಭೀಕರ ಆತ್ಮಹತ್ಯಾ ದಾಳಿ, ಕನಿಷ್ಠ 15 ಸಾವು

share with us

ಕಾಬುಲ್: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆಫ್ಘಾನಿಸ್ತಾನ ಸಂಸದೀಯ ಚುನಾವಣೆ ನಿಮಿತ್ತ ಮತದಾನದ ವೇಳೆಯಲ್ಲೇ ಉಗ್ರರು ತಮ್ಮ ಅಟ್ಟಹಾಸೆ ಮೆರೆದಿದ್ದು, ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಉತ್ತರ ಕಾಬುಲ್ ನ ಮತಗಟ್ಟೆಗೆ ಆಗಮಿಸಿದ್ದ ಆತ್ಮಹತ್ಯಾ ದಾಳಿಕೋರ ನೋಡ ನೋಡುತ್ತಿದ್ದಂತೆಯೇ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಈ ವೇಳೆ ಮತದಾನಕ್ಕೆ ಆಗಮಿಸಿದ್ದ 10 ಮಂದಿ ನಾಗರಿಕರು ಮತ್ತು 5 ಮಂದಿ ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ, ಚುನಾವಣಾ ಸಿಬ್ಬಂದಿಗಳು ಸೇರಿ ಸುಮಾರು 150ಕ್ಕೂ ಅಧಿಕ ಮಂದಿ ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವೇಳೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 1 ಮಂದಿ ಸಾವಿಗೀಡಾಗಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರ ಗಾಯಾಳುಗಳ ಸಂಖ್ಯೆ ಹೆಚ್ಚಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಅಂತೆಯೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ನೇತೃತ್ವ ವಹಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا