Urdu   /   English   /   Nawayathi

'ಇದು ರೈಲು ಅವಘಡ ಅಲ್ಲ, ಯಾರಿಗೂ ಪರಿಹಾರ ಇಲ್ಲ' : ಭಾರತೀಯ ರೈಲ್ವೆ

share with us

ಹೊಸದಿಲ್ಲಿ : 20 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) 'ಅಮೃತಸರ ಅವಘಡವನ್ನು ತಾನು ರೈಲು ಅಪಘಾತಗಳ ಪಟ್ಟಿಗೆ ಸೇರಿಸುವುದಿಲ್ಲ. ಇದೊಂದು ರೈಲು ಅಪಘಾತ ಅಲ್ಲ, ಹಾಗಾಗಿ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡುವುದಿಲ್ಲ' ಎಂದು ಭಾರತೀಯ ರೈಲ್ವೆ ಹೇಳಿದೆ. ಕೇಂದ್ರ ಸಹಾಯಕ ರೈಲ್ವೆ ಸಚಿವ ಮನೋಜ್‌ ಸಿನ್ಹಾ ಅವರು "ಘಟನೆಯ ಬಗ್ಗೆ ಯಾವುದೇ ತನಿಖೆಯನ್ನು ಕೈಗೊಳ್ಳುವ ಅಗತ್ಯ ರೈಲ್ವೇ ಗೆ ಇಲ್ಲ; ರೈಲಿನ ಚಾಲಕರಿಗೆ ಎಲ್ಲಿ ರೈಲನ್ನು ನಿಧಾನವಾಗಿ ಚಲಾಯಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಸೂಚನೆಗಳಿದ್ದವು; ಅವಘಡ ನಡೆದಲ್ಲಿ ತಿರುವುಗಳಿದ್ದವು; ಹಾಗಾಗಿ ರೈಲಿನ ಚಾಲಕರಿಗೆ ಜನರು ಹಳಿಯಲ್ಲಿ ನಿಂತಿರುವುದು ಗೋಚರಿಸಿರಲಿಲ್ಲ. ಹಾಗಾಗಿ ನಾವು ಯಾವುದರ ಬಗ್ಗೆ ತನಿಖೆ ನಡೆಸಬೇಕು ? ರೈಲುಗಳಿರುವುದೇ ವೇಗವಾಗಿ ಸಾಗಲು' ಎಂದು ಹೇಳಿದ್ದಾರೆ.

ನ್ಯಾಯಾಂಗ ತನಿಖೆ: ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ 

ಅಮೃತಸರ ರೈಲು ಅವಘಡ ನಡೆದು ಒಂದು ದಿನದ ತರುವಾಯ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಇಂದು ಶನಿವಾರ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಳುಗಳನ್ನು ಭೇಟಿಯಾದರಲ್ಲ ಅವಘಡದ ನ್ಯಾಯಾಂಗ ತನಿಖೆಗೆ ಆದೇಶಿಸಿದರು.

ರೈಲು ದುರಂತವನ್ನು ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ರೈಲು ದುರಂತದ ಸಂತ್ರಸ್ತರ ಬಗ್ಗೆ ಪಂಜಾಬ್‌ ಮತ್ತು ಭಾರತ ರಾಷ್ಟ್ರದ ಜನರ ಸಹಾನುಭೂತಿ ಇದೆ. ಘಟನೆಯ ತನಿಖೆಗಾಗಿ ಆಳಕ್ಕೆ ಇಳಿಯುವ ಬದ್ಧತೆ ಪಂಜಾಬ್‌ ಸರಕಾರಕ್ಕೆ ಇದೆ; ಹೆಚ್ಚಿನ ಮೃತ ದೇಹಗಳನ್ನು ಈಗಾಗಲೇ ಗುರುತಿಸಲಾಗಿದ್ದು ಈಗ ಕೇವಲ 9 ಮೃತದೇಹಗಳು ಮಾತ್ರವೇ ಬಾಕಿ ಉಳಿದಿವೆ; ಅವುಗಳನ್ನೂ ಬೇಗನೆ ಗುರುತಿಸಲಾಗುವುದು ; ನಾವು ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಕೋರಿದ್ದೇವೆ' ಎಂದು ಸಿಎಂ ಅಮರೀಂದರ್‌ ಸಿಂಗ್‌ ಹೇಳಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا