Urdu   /   English   /   Nawayathi

2017ರಲ್ಲಿ ಅಮೆರಿಕಾ ನಾಗರಿಕತ್ವ ಪಡೆದ ಭಾರತೀಯರ ಸಂಖ್ಯೆ 50,000

share with us

ವಾಷಿಂಗ್ಟನ್: 20 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಕಳೆದ ವರ್ಷ 2017ರಲ್ಲಿ 50 ಸಾವಿರಕ್ಕೂ ಅಧಿಕ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲಾಗಿದ್ದು ಅದು ಹಿಂದಿನ ವರ್ಷಕ್ಕಿಂತ ನಾಲ್ಕು ಸಾವಿರದಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.ಹೋಮ್ ಲ್ಯಾಂಡ್ ಸೆಕ್ಯುರಿಟೀಸ್ ಇಲಾಖೆಯ ಇತ್ತೀಚಿನ ವಾರ್ಷಿಕ ವಲಸೆ ವರದಿ ಪ್ರಕಾರ 2017ರಲ್ಲಿ ಸುಮಾರು 50 ಸಾವಿರದ 802 ಭಾರತೀಯರು ಅಮೆರಿಕಾ ನಾಗರಿಕತ್ವವನ್ನು ಪಡೆದಿದ್ದಾರೆ.

ಇದು 2016ರ ಅಂಕಿಅಂಶಕ್ಕಿಂತ ನಾಲ್ಕು ಸಾವಿರ ಪಟ್ಟು ಹೆಚ್ಚಾಗಿದೆ. 2016ರಲ್ಲಿ 46,188 ಭಾರತೀಯರು ಮತ್ತು 2015ರಲ್ಲಿ 42,213 ಭಾರತೀಯರು ಅಮೆರಿಕಾ ನಾಗರಿಕತ್ವವನ್ನು ಪಡೆದಿದ್ದರು.

2017ರಲ್ಲಿ ಒಟ್ಟಾರೆಯಾಗಿ 7,07,265 ವಿದೇಶಿ ನಾಗರಿಕರು ಅಮೆರಿಕಾ ನಾಗರಿಕತ್ವವನ್ನು ಪಡೆದಿದ್ದಾರೆ. ಈ ಸಂಖ್ಯೆ 2016ರಲಲಿ 7,53,060 ಮತ್ತು 2015ರಲ್ಲಿ 7,30,259 ಆಗಿತ್ತು. ವಿದೇಶಿ ಪ್ರಜೆಗಳು ಅಮೆರಿಕಾ ನಾಗರಿಕತ್ವ ಪಡೆದ ಸಂಖ್ಯೆಯಲ್ಲಿ ಮೆಕ್ಸಿಕೊ 1,18,559 ಮಂದಿ ಮೂಲಕ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿ, ಚೀನಾ 37,674 ಮಂದಿ ಮೂಲಕ ಮೂರನೇ ಸ್ಥಾನದಲ್ಲಿ, ಫಿಲಿಫೈನ್ಸ್ 36,828 ಮೂಲಕ ನಾಲ್ಕನೇ ಸ್ಥಾನದಲ್ಲಿ ಹಾಗೂ ಡೊಮಿನಿಕನ್ ರಿಪಬ್ಲಿಕ್ 29,734 ನಾಲ್ಕನೇ ಸ್ಥಾನದಲ್ಲಿ ಹಾಗೂ ಕ್ಯೂಬಾ 25,961 ಮೂಲಕ 5ನೇ ಸ್ಥಾನದಲ್ಲಿದೆ.

ಅಮೆರಿಕಾ ನಾಗರಿಕತ್ವ ಪಡೆದ ವಿದೇಶಿಗರಲ್ಲಿ ಮಹಿಳೆಯರು 3,96,234 ಮೂಲಕ ಪುರುಷರಿಗಿಂತ ಹೆಚ್ಚಾಗಿದ್ದಾರೆ. ಪುರುಷರ ಸಂಖ್ಯೆ 3,10,987 ರಷ್ಟಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا