Urdu   /   English   /   Nawayathi

ಭೀಕರ ವಿಡಿಯೋ: ಆಹಾರ ನೀಡುವಾಗ ಶಾರ್ಕ್ ಇದ್ದ ಟ್ಯಾಂಕ್‌ಗೆ ಬಿದ್ದ ಮಹಿಳೆ!

share with us

ಚೀನಾ: 20 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆಹಾರ ಹಾಕಲು ತೆರದಿದ್ದ ಶಾರ್ಕ್ ಟ್ಯಾಂಕ್‌ಗೆ ಮಹಿಳೆಯೊಬ್ಬಳು ಬಿದ್ದು ಸಾವಿನ ಜೊತೆಗೆ ಹೋರಾಡಿದ ಭೀಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಚೀನಾದ ಜಿಯಾಜಿಂಗ್ ಜಿಲ್ಲೆಯ ಮಾಲ್ ವೊಂದರಲ್ಲಿ ಶಾರ್ಕ್ ಗಳನ್ನು ಸಾಕಲಾಗಿತ್ತು. ಇಂದು ಶಾರ್ಕ್ ಗೆ ಆಹಾರ ಹಾಕುವ ಸಲುವಾಗಿ ಟ್ಯಾಂಕ್ ನ ಮುಚ್ಚಳವನ್ನು ತೆರೆಯಲಾಗಿತ್ತು. ಇದನ್ನು ಗಮನಿಸದೆ ಮಹಿಳೆಯೊಬ್ಬಳು ಓಡುತ್ತಿದ್ದಾಗ ಕಾಲು ಜಾರಿ ಟ್ಯಾಂಕ್ ಒಳಗೆ ಬಿದ್ದಿದ್ದಾಳೆ. ಅಷ್ಟರಲ್ಲೇ ಅಲ್ಲೆ ಇದ್ದ ಇತರ ಸಿಬ್ಬಂದಿ ಕೂಡಲೇ ಟ್ಯಾಂಕ್ ಒಳಗೆ ಜಿಗಿದು ಮಹಿಳೆಯನ್ನು ರಕ್ಷಿಸಿದ್ದಾರೆ. 

ಸಿಬ್ಬಂದಿಗಳು ಕೂಡಲೇ ಜಾಗರೂಕರಾಗಿದ್ದರಿಂದ ಮಹಿಳೆಯ ಜೀವ ಉಳಿಸಲು ಸಾಧ್ಯವಾಗಿದೆ. ಇಲ್ಲದಿದ್ದರೆ ಹಸಿದಿದ್ದ ಶಾರ್ಕ್ ಗೆ ಮಹಿಳೆ ಬಲಿಯಾಗುವ ಸಾಧ್ಯತೆ ಇರುತ್ತಿತ್ತು.

https://youtu.be/-SycH4SZ3eg

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا