Urdu   /   English   /   Nawayathi

ಬೆಂಗಳೂರಿನಲ್ಲಿ ಬಿಟ್‌ಕಾಯ್ನ್ ಎಟಿಎಂ ಶುರು

share with us

ಹೊಸದಿಲ್ಲಿ: 19 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ತೀವ್ರ ಎಚ್ಚರಿಕೆಯ ಮಧ್ಯೆಯೂ ಬಿಟ್‌ಕಾಯ್ನ್ ವಹಿವಾಟು ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಯುನೋ ಕಾಯ್ನ್ ಸಂಸ್ಥೆಯು ಬಿಟ್‌ ಕಾಯ್ನ್ ಎಟಿಎಂ ಅನ್ನು ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೆಂಪ್‌ಫೋರ್ಟ್‌ ಮಾಲ್‌ನಲ್ಲಿ ಸ್ಥಾಪಿಸಿದೆ. ಇದು ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯಕ್ಕೆ ಮತ್ತೂಂದು ಸುತ್ತಿನ ತಲೆನೋವಿಗೆ ಕಾರಣ ವಾಗುವ ಸಾಧ್ಯತೆಯಿದೆ.

ದೇಶ ದಲ್ಲಿ ಸ್ಥಾಪನೆ ಯಾದ ಮೊದಲ ವರ್ಚುವಲ್‌ ಕರೆನ್ಸಿ ಎಟಿಎಂ ಇದಾಗಿದ್ದು, ಮುಂದಿನ ದಿನಗಳಲ್ಲಿ ದಿಲ್ಲಿ ಹಾಗೂ ಮುಂಬಯಿಯಲ್ಲಿ ಇದೇ ಮಾದರಿ ಎಟಿಎಂ ಸ್ಥಾಪಿಸಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಇದು ಸಾಮಾನ್ಯ ಎಟಿಎಂಗಿಂತ ಸ್ವಲ್ಪ ವಿಭಿನ್ನವಾಗಿ ಕೆಲಸ ಮಾಡುತ್ತದೆ. ಎಟಿಎಂ ಮೂಲಕ ಹಣವನ್ನು ತಮ್ಮ ಖಾತೆಗೆ ಯುನಿಕಾಯ್ನ್ ಗ್ರಾಹಕರು ತುಂಬಬಹುದು. ಅನಂತರ ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ಬಿಟ್‌ಕಾಯ್ನ್ ಖರೀದಿ ಮಾಡಬಹುದಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಯ ಜತೆಗೆ ಸಂಬಂಧ ಹೊಂದಿಲ್ಲದ್ದರಿಂದ, ಆರ್‌ಬಿಐ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا