Urdu   /   English   /   Nawayathi

ಅಫ್ಗಾನಿಸ್ತಾನದಲ್ಲಿ ಭೀಕರ ಬರ: 30 ಲಕ್ಷ ಜನರಿಗೆ ತುರ್ತು ಆಹಾರ ಅಗತ್ಯ

share with us

ಕಾಬೂಲ್‌: 19 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಫ್ಗಾನಿಸ್ತಾನದಲ್ಲಿ ಭೀಕರ ಬರ ತಲೆದೋರಿದ್ದು, 30 ಲಕ್ಷ ಮಂದಿಗೆ ತುರ್ತಾಗಿ ಆಹಾರ ಪೂರೈಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಉತ್ತರ ಮತ್ತು ಪಶ್ಚಿಮ ಅಫ್ಗಾನಿಸ್ತಾನದಲ್ಲಿ ಬೆಳೆಗಳು ನಾಶವಾಗಿದ್ದು,  ಜಾನುವಾರುಗಳು ಸಂಕಷ್ಟದ ಸ್ಥಿತಿಯಲ್ಲಿವೆ. ಕುಡಿಯುವ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ತೊರೆದು ವಲಸೆ ಹೋಗುತ್ತಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ದಿನಕ್ಕೆ ಒಂದು ಬಾರಿಯೂ ಊಟ ಮಾಡದೆ ಬದುಕುತ್ತಿರುವವರು ಇದ್ದಾರೆ. ಅವರು ಕೇವಲ ಬ್ರೆಡ್‌ ಮತ್ತು ಚಹಾ ಸೇವಿಸಿಯೇ ಬದುಕಿರುವ ಸಾಧ್ಯತೆಗಳಿವೆ’ ಎಂದು ಅಫ್ಗಾನಿಸ್ತಾನದಲ್ಲಿನ ವಿಶ್ವಸಂಸ್ಥೆ ಮಾನವೀಯತೆ ಸಮನ್ವಯಾಧಿಕಾರಿ ಟೊಬಿ ಲ್ಯಾಂಝರ್‌ ತಿಳಿಸಿದ್ದಾರೆ.

'ಶೀಘ್ರದಲ್ಲೇ ಈ ಜನರಿಗೆ ಆಹಾರ ತಲುಪಿಸದಿದ್ದರೆ ಸಂಕಷ್ಟದ ಸ್ಥಿತಿಗೆ ತಲುಪುವ ಸಾಧ್ಯತೆಗಳಿವೆ. ಚಳಿಗಾಲದಲ್ಲಿ ಈ ಪರಿಸ್ಥಿತಿ ವಿಕೋಪಕ್ಕೆ ತಲುಬಹುದು’ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಹಲವು ಸಂಸ್ಥೆಗಳು 6 ಲಕ್ಷ ಮಂದಿಗೆ ಗೋಧಿ ಹಿಟ್ಟು ಸೇರಿದಂತೆ ಕೆಲವು ಆಹಾರ ಪದಾರ್ಥಗಳನ್ನು ನೀಡಿದ್ದವು. ಆದರೂ, ಆಹಾರ, ಆಶ್ರಯ ಮತ್ತು ಆರೋಗ್ಯ ಸೇವೆಗಳಿಗೆ ಉಂಟಾಗಿರುವ ಅಪಾರ ಬೇಡಿಕೆಯನ್ನು ನೀಗಿಸಲು ಅಫ್ಗಾನಿಸ್ತಾನದ ಅಧಿಕಾರಿಗಳಿಗೆ ಮತ್ತು ಅಂತರರಾಷ್ಟ್ರೀಯ ನೆರವು ನೀಡುವ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا