Urdu   /   English   /   Nawayathi

ಮಾತು ಬಾರದ ಮೂಕಿ ಮೇಲೆ ಅತ್ಯಾಚಾರ: 4 ಸೇನಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲು

share with us

ಪುಣೆ: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮಾತು ಬಾರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಸೇನಾ ಸಿಬ್ಬಂದಿ ವಿರುದ್ಧ ಪುಣೆ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿದ್ದಾರೆ. 
ಸಂತ್ರಸ್ತ ಮಹಿಳೆ ಇಂದೋರ್ ನ ಎನ್ ಜಿಒವೊಂದಕ್ಕೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಎನ್ ಜಿಎ ಪೊಲೀಸರಿಗೆ, ರಕ್ಷಣಾ ಸಚಿವಾಲಯಕ್ಕೆ ಮತ್ತು ಸೇನಾ ಮುಖ್ಯಸ್ಥರಿಗೂ ದೂರು ಸಲ್ಲಿಸಿದೆ.

ಈ ಸಂಬಂಧ ಖಡ್ಕಿ ಪೊಲೀಸರು ನಾಲ್ವರು ಸೇನಾ ಸಿಬ್ಬಂದಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಮೂವರ ವಿರುದ್ಧ ಐಪಿಸಿ ಸೆಕ್ಷೆನ್ 376 ಹಾಗೂ ಒಬ್ಬರ ವಿರುದ್ಧ ಐಪಿಸಿ ಸೆಕ್ಷನ್ 354ರಡಿ ಕೇಸ್ ದಾಖಲಿಸಿದ್ದಾರೆ.

ಈ ನಾಲ್ವರು ಸಿಬ್ಬಂದಿ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಸ್ಪತ್ರೆಯಲ್ಲಿಯೇ ಮೂಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا