Urdu   /   English   /   Nawayathi

ಸೋಫಾ ಕೆಳಗೆ ಬಾಂಬ್ ಇಟ್ಟು ಚುನಾವಣಾ ಅಭ್ಯರ್ಥಿಯನ್ನು ಉಡಾಯಿಸಿದರು..!

share with us

ಕಂದಹಾರ್: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿ ದಿದ್ದು, ಸೋಫಾ ಕೆಳಗೆ ಇಡಲಾಗಿದ್ದ ಬಾಂಬ್ ಸ್ಫೋಟಗೊಂಡು ಚುನಾವಣಾ ಅಭ್ಯರ್ಥಿಯೊಬ್ಬರು ಹತರಾಗಿ ಅನೇಕರು ಗಾಯಗೊಂಡಿ ದ್ದಾರೆ. ಈ ಮೂಲಕ ಅ.20ರಂದು ನಡೆಯುವ ಪಾರ್ಲಿಮೆಂಟ್ ಚುನಾವಣೆಗೆ ಮುನ್ನವೇ ಹಿಂಸಾಚಾರ ಭುಗಿಲೆದ್ದಂತಾಗಿದೆ. ಸೋಫಾ ಬಾಂಬ್ ದಾಳಿಯಲ್ಲಿ ದಕ್ಷಿಣ ಹೆಲ್ಮಂಡ್ ಪ್ರಾಂತ್ಯದ ಚುನಾವಣಾ ಸ್ಪರ್ಧಿ ಜಬ್ಬರ್ ಖರ್ಮನ್ ಹತರಾಗಿದ್ದಾರೆ. ಈ ಹಿಂಸಾಕೃತ್ಯದ ಹೊಣೆಯನ್ನು ತಾಲಿಬಾನ್ ಉಗ್ರರು ಹೊತ್ತುಕೊಂಡಿ ದ್ದಾರೆ.

ಚುನಾವಣಾ ಪ್ರಚಾರ ಕೈಗೊಳ್ಳುವುದಕ್ಕೆ ಮುನ್ನ ಜಬ್ಬರ್ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಕುಳಿತ್ತಿದ್ದ ಸೋಫಾ ಸ್ಫೋಟಗೊಂಡು ಹತರಾದರು. ಅವರ ಅನೇಕ ಬೆಂಬಲಿಗರು ತೀವ್ರ ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا