Urdu   /   English   /   Nawayathi

ಪಾಕಿಸ್ತಾನ: ಮಕ್ಕಳ ಹಂತಕನಿಗೆ ಸಂತ್ರಸ್ತೆಯ ತಂದೆ ಎದುರು ಗಲ್ಲು

share with us

ಲಾಹೋರ್‌: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಎಂಟು ಮಕ್ಕಳ ಸರಣಿ ಹಂತಕನನ್ನು ಬುಧವಾರ ಬೆಳಿಗ್ಗೆ ಪಾಕಿಸ್ತಾನದ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಅಲ್ಲಿನ ಉಚ್ಚ ನ್ಯಾಯಾಲಯವು ಅಪರಾಧಿಯನ್ನು ಸಾರ್ವಜನಿಕವಾಗಿ ಮರಣದಂಡನೆಗೆ ಗುರಿಯಾಗಿಸುವುದಕ್ಕೆ ಸಮ್ಮತಿ ನೀಡಿರಲಿಲ್ಲ. ಜನವರಿಯಲ್ಲಿ 7 ವರ್ಷದ ಬಾಲಕಿ ಝೈನಾಬ್‌ ಅನ್ಸಾರಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಬಾಲಕಿಯ ತಂದೆಯ ಎದುರು ಲಾಹೋರ್‌ನ ಕಾರಾಗೃಹದಲ್ಲಿ ಹಂತಕ ಮೊಹಮ್ಮದ್‌ ಇಮ್ರಾನ್‌ನನ್ನು ಗಲ್ಲಿಗೇರಿಸಲಾಗಿದೆ. 

ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದ ಝೈನಾಬ್‌ ಪ್ರಕರಣವನ್ನು ಎರಡು ವಾರಗಳಲ್ಲಿ ಪೊಲೀಸರು ಭೇದಿಸಿದ್ದರು. ಬಾಲಕಿ ಝೈನಾಬ್‌ ದೇಹವನ್ನು ಕಸೂರ್‌ ನಗರದಲ್ಲಿನ ಕಸದ ರಾಶಿಯಲ್ಲಿ ಎಸೆದಿದ್ದ ಮೊಹಮ್ಮದ್‌ ಇಮ್ರಾನ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆತ ಇತರೆ ಮಕ್ಕಳನ್ನೂ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ವಿಶೇಷ ಅನುಮತಿ ಮೇರೆಗೆ ಝೈನಾಬ್‌ ತಂದೆಗೆ ಮರಣದಂಡನೆಯ ಸಮಯದಲ್ಲಿ ಇರಲು ಅವಕಾಶ ನೀಡಲಾಗಿತ್ತು. 

ನಸುಗೆಂಪು ಬಣ್ಣದ ಕೋಟ್‌ ಧರಿಸಿದ್ದ ಮುದ್ದು ಮೊಗದ ಪುಟಾಣಿ ಝೈನಾಬ್‌ಳ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಪಾಕಿಸ್ತಾನದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿ, ಶೀಘ್ರವೇ ಹಂತಕನನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಇಮ್ರಾನ್‌ನನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸುವಂತೆ ಅನ್ಸಾರಿ ಕೋರ್ಟ್‌ಗೆ ಮನವಿ ಮಾಡಿದ್ದರು. 

ಝೈನಾಬ್‌ ನಾಪತ್ತೆಯಾದ ಸಮಯದಲ್ಲಿ ಅನ್ಸಾರಿ ಮತ್ತು ಆತನ ಪತ್ನಿ ಸೌದಿ ಅರೇಬಿಯಾದಲ್ಲಿ ತೀರ್ಥಯಾತ್ರೆದಲ್ಲಿದ್ದರು. ’ನನ್ನ ಮಗಳು ಮರಳಿ ಬರುವುದಿಲ್ಲ. ಆದರೆ, ನಮಗೆ ನ್ಯಾಯ ದೊರೆತಿರುವ ಸಮಾಧಾನವಿದೆ’ ಎಂದು ಅನ್ಸಾರಿ ಪ್ರತಿಕ್ರಿಯಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا