Urdu   /   English   /   Nawayathi

ಹೆಬಳೆ ಕಾರ್ಯದರ್ಶಿಯ ಮನೆಯಲ್ಲಿ ಕಳ್ಳತನ ಮಾಡಿದವರ ಬಂಧನ

share with us

ಭಟ್ಕಳ: 16 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಸೆಪ್ಟೆಂಬರ್ 14ರಂದು ಹೆಬಳೆ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿಗಳಾದ ಲಿಂಗಪ್ಪ ನಾಯ್ಕ್ ಅವರ ಮನೆಯ ಹಿಂದಿನ ಬಾಗಲು ಮುರಿದು ಕಳ್ಳತನ ಮಾಡಲಾಗಿತ್ತು. ಸುಮಾರು 78 ಗ್ರಾಂ ತೂಕದ 1,57,000 ರೂ ಬೆಲೆ ಬಾಳುವ ಚಿನ್ನಾಭರಣ ಮತ್ತು ಬೆಳ್ಳಿ ಕಳುವಾಗಿದ್ದು, ದೂರು ದಾಖಲಿಸಿಕೊಂಡ ಪೋಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಅಕ್ಟೋಬರ್ 14 ಭಾನುವಾರದಂದು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದಲ್ಲಿರುವ ಆರೋಪಿಗಳು ಹೆಬಳೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ಹನೀಫಾಬಾದಿನ ತಲ್ಹಾ ಕಾಲೋನಿಯ ನಿವಾಸಿ ಜಾಫರ್ ಸಾದಿಕ್ ಹಾಗೂ ಮಗ್ದುಂ ಕಾಲೋನಿ ಸಫಾ ಸ್ಟ್ರೀಟಿನ ನಿವಾಸಿ ಸೈಯದ್ ಮೂಸಾ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜಾಫರ್ ಸಾದಿಕನಿಗೆ ಕುಮಟಾ ಕಾರಾಗೃಹ ಹಾಗೂ ಮೂಸಾ ಎಂಬಾತನನ್ನು ಕಾರವಾರ ಕಾರಾಗೃಹಕ್ಕೆ ಕಳಿಸಲಾಗಿದೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا