Urdu   /   English   /   Nawayathi

ದೀರ್ಘಾವಧಿ ಪ್ರಯಾಣ: ದಾಖಲೆ ಬರೆದ ಸಿಂಗಾಪುರ ಏರ್‌ಲೈನ್ಸ್‌

share with us

ನ್ಯೂಯಾರ್ಕ್‌: 14 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಅತಿ ದೀರ್ಘ‌ ಪ್ರಯಾಣ ಮಾಡಿದ ವಾಣಿಜ್ಯ ವಿಮಾನವೆಂಬ ಹೆಗ್ಗಳಿಕೆಗೆ ಸಿಂಗಾಪುರ ಏರ್‌ಲೈನ್ಸ್‌ನ "ಎಸ್‌.ಕ್ಯು. 22' ಪಾತ್ರವಾಗಿದೆ. 150 ಪ್ರಯಾಣಿಕರು, 17 ಸಿಬಂದಿ ಹೊಂದಿದ್ದ ಈ ವಿಮಾನ ಸಿಂಗಾಪುರದಿಂದ ಗುರುವಾರ ಹೊರಟು, ಒಟ್ಟು 16,500 ಕಿ.ಮೀ.ಗಳಷ್ಟು ದೂರ ಕ್ರಮಿಸಿ, ಶುಕ್ರವಾರ ಮುಂಜಾನೆ ಅಮೆರಿಕದ ನೆವಾರ್ಕ್‌ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಈ ಮೂಲಕ, ಒಟ್ಟು 17 ಗಂಟೆ 52 ನಿಮಿಷಗಳ ಕಾಲ ಹಾರಾಟ ನಡೆಸುವ ಮೂಲಕ ಈ ವಿಮಾನ ಹೊಸ ದಾಖಲೆ ಬರೆದಿದೆ. 

ಈ ಹಿಂದೆ, ಆಕ್ಲೆಂಡ್‌ನಿಂದ ದೋಹಾಕ್ಕೆ 17 ಗಂಟೆ, 40 ನಿಮಿಷಗಳ ಕಾಲ ಸತತ ಪ್ರಯಾಣ ಮಾಡಿದ್ದ ಕತಾರ್‌ ಏರ್‌ವೆಸ್‌ ಫ್ಲೈಟ್‌ 921 ವಿಮಾನ ಈ ದಾಖಲೆ ಹೊಂದಿತ್ತು. ಅಂದಹಾಗೆ, ಸಿಂಗಾಪುರ- ಅಮೆರಿಕ ನಡುವಿನ ಒಂದು ಟ್ರಿಪ್‌ಗೆ ಪ್ರಯಾಣಿಕರು ಕನಿಷ್ಠ 1,58,000 ರೂ. (ಪ್ರೀಮಿಯಂ ಎಕಾನಮಿ) ತೆರಬೇಕಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا