Urdu   /   English   /   Nawayathi

ನೇಪಾಳದಲ್ಲಿ ಹಿಮಕುಸಿತ: 9 ಮಂದಿ ಹಿಮಸಮಾಧಿ

share with us

ಕಠ್ಮಂಡು: 14 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರೀ ಪ್ರಮಾಣದ ಹಿಮಕುಸಿತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 9 ಮಂದಿ ಪರ್ವತಾರೋಹಿಗಳು ಹಿಮಸಮಾಧಿಯಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ. 
ಮೃತಪಟ್ಟಿರುವ 9 ಮಂದಿಯ ಪೈಕಿ 5 ಮಂದಿ ದಕ್ಷಿಣ ಕೊರಿಯಾ ಪ್ರಜೆಗಳು, ಉಳಿದವರು ಅವರ ಸಹಾಯಕ್ಕೆ ನಿಯೋಜನೆಗೊಂಡಿದ್ದ ನೇಪಾಳ ಸಿಬ್ಬಂದಿ ಎಂದು ತಿಳಿದುಬಂದಿದೆ. 

ಪಶ್ಚಿಮ ನೇಪಾಳದಲ್ಲಿರುವ ಗುರ್ಜಾ ಪರ್ವ 7193 ಮೀಟರ್ ಎತ್ತರವಿದೆ. ಈ ಪರ್ವತವನ್ನು ಏರುವ ಉದ್ದೇಶದಿಂದ 3500 ಮೀಟರ್ ಎತ್ತರದ ಬೇಸ್ ಕ್ಯಾಂಪ್ ತಲುಪಿದ್ದ ಪರ್ವತಾರೋಹಿಗಳು ಸೂಕ್ತ ವಾತಾವರಣಕ್ಕಾಗಿ ಶುಕ್ರವಾರ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಭಾರಿ ಪ್ರಮಾಣದ ಹಿಮ ಏಕಾಏಕಿ ಕುಸಿದು ಬಿದ್ದಿದೆ. ಇದೇ ವೇಳೆ ಭೂಕುಸಿತವೂ ಉಂಟಾಗಿದೆ. ಹೀಗಾಗಿ ಪರ್ವತಾರೋಹಿಗಳು ಹಿಮಸಮಾಧಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا