Urdu   /   English   /   Nawayathi

ಪ್ರತಿಭೆ ಇದ್ದವರು ಮಾತ್ರ ಅಮೆರಿಕಾಕ್ಕೆ ಬನ್ನಿ- ಡೊನಾಲ್ಡ್ ಟ್ರಂಪ್

share with us

ವಾಷಿಂಗ್ಟನ್: 14 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ)  ಪ್ರತಿಭೆ ಇದ್ದವರಿಂದ ದೇಶಕ್ಕೆ ಅನುಕೂಲವಾಗಲಿದ್ದು, ಅಂತಹವರು ಮಾತ್ರ ಅಮೆರಿಕಾಕ್ಕೆ ಬನ್ನಿ, ಆದರೆ,  ಕಾನೂನುಬಾಹಿರವಾಗಿ ದೇಶದೊಳಗೆ ನುಸುಳಲು ಪ್ರಯತ್ನಿಸಬೇಡಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗಡಿ ವಿಚಾರದಲ್ಲಿ ತಾನೂ ಕಠಿಣವಾಗಿದ್ದು, ನ್ಯಾಯಯುತ ರೀತಿಯಲ್ಲಿ  ದೇಶದೊಳಗೆ ಬನ್ನಿ. ಪ್ರತಿಭೆ  ಆಧಾರದ ಮೇಲೆ ದೇಶಕ್ಕೆ ಬರುವವರನ್ನು ಸ್ವಾಗತಿಸುವುದಾಗಿ ವೈಟ್ ಹೌಸ್ ನಲ್ಲಿ  ಹೇಳಿದ್ದಾರೆ.

ಅಕ್ರಮ ವಲಸೆ ಕುರಿತ ಸರಣಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಟ್ರಂಪ್,  ಪ್ರತಿಭೆ ಆಧಾರದ ಜನ ದೇಶಕ್ಕೆ ಬರುವುದನ್ನು ಸ್ವಾಗತಿಸುವುದಾಗಿ ಪುನರುಚ್ಚರಿಸಿದರು. ಇದರಿಂದಾಗಿ  ಭಾರತದಂತಹ ತಂತ್ರಜ್ಞಾನ ವೃತ್ತಿಪರರಿಗೆ ನೆರವಾಗಲಿದೆ ಎಂದಿದ್ದಾರೆ.

ಅಮೆರಿಕಾಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಜನರು ವಲಸೆ ಬರುತ್ತಾರೆ. ನಮ್ಮ ದೇಶದಲ್ಲಿ ಅತ್ಯುನ್ನತ ಕಾರು  ಕಂಪನಿಗಳಿವೆ. ಪಾಕ್ಸ್ ಕಾನ್ ನಂತರ ಕಂಪನಿ ಬೃಹತ್ ಘಟಕ ವಿಸ್ಕಾನ್ ಸಿನ್ ಗೆ ಹೋಗಿದೆ ಎಂದು ಹೇಳಿದ ಟ್ರಂಪ್, ದೇಶಕ್ಕೆ ಜನರ ಅಗತ್ಯವಿದೆ. ಆದರೆ, ಪ್ರತಿಭೆ ಇದ್ದವರಿಂದ ಮಾತ್ರ ದೇಶಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಚೀನಾದ ವಲಸೆ ನೀತಿಗೆ  ವಿರೋಧ ವ್ಯಕ್ತಪಡಿದ ಟ್ರಂಪ್,  ಅಪರಾಧಿಗಳು ದೇಶದೊಳಗೆ ಬರಲು ಪ್ರಯತ್ನಿಸಬೇಡಿ. ತಾವೂ ಅಧಿಕಾರ ವಹಿಸಿಕೊಂಡ ನಂತರ ಅನೇಕ ಬದಲಾವಣೆಯಾಗಿದ್ದು ,  ಆರ್ಥಿಕವಾಗಿ ಆಕರ್ಷಣೀಯ ರಾಷ್ಟ್ರವಾಗಿದೆ. ಅಕ್ರಮ ವಲಸೆಗಾರರನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಸಂಸ್ಥೆಗಳು ವಿಶ್ವಾಸಾರ್ಹ ಕೆಲಸ ಮಾಡುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا