Urdu   /   English   /   Nawayathi

ಭಟ್ಕಳದಲ್ಲಿ ಐದು ದಿನಗಳ ಮಾಧ್ಯಮ ಕಾರ್ಯಾಗಾರದ ಉದ್ಘಾಟನೆ

share with us

ಭಟ್ಕಳ: 13 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಟ್ಕಳದ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಮಂಗಳೂರು ಮಾಧ್ಯಮ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಐದು ದಿನಗಳ ಪತ್ರಿಕೋದ್ಯಮದ ಕಾರ್ಯಾಗಾರದ ಉದ್ಘಾಟನೆ ಶನಿವಾರದಂದು ನಡೆಸಿತು. ಉದ್ಘಾಟನೆಯ ವೇಳೆ ತುಮಕೂರಿನ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸಿಬಂಥಿ ಪದ್ಮನಾಭ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಧ್ಯಮಗಳ ಪ್ರಮುಖ ಕೆಲಸ ಶಿಕ್ಷಣ, ಮಾಹಿತಿ ಹಾಗೂ ಮನರಂಜನೆಯಾಗಿದ್ದು, ಈದಿನಗಳಲ್ಲಿ ಮಾಧ್ಯಮಗಳು ಕೇವಲ ಮನರಂಜೆನೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು. ಮಾಧ್ಯಮಗಳು ದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಹೊರತು ಅನಗತ್ಯ ವಿಷಯಗಳನ್ನು ಹರಿಡಿಸಿ ಜನರ ಗಮನ ಬೇರೆಕಡೆಗೆ ಸೆಳೆಯುವಂತೆ ಮಾಡುತ್ತಿವೆ. ಇಂತಹ ಕೃತ್ಯಗಳಿಂದ ಜನರಲ್ಲಿ ಮಾಧ್ಯಮಗಳ ಪ್ರಾಮುಖ್ಯತೆ ಕುಂಠಿತಗೊಳ್ಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ನಿಷ್ಠೆಯಿಂದ ಸರಿಯಾದ ಹಾದಿಯನ್ನು ಆಯ್ದುಕೊಳ್ಳಬೇಕು ಎಂದು ಸ್ಪೂರ್ತಿಸಿದರು. ಸಭೆಯಲ್ಲಿ ಜುಮಾತುಲ್ ಮುಸ್ಲಿಮೀನಿನ ಖಾಜಿ(ನಿರ್ಣಯಕಾರ) ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ, ಮೌಲಾನಾ ಖ್ವಾಜಾ ಅಕ್ರಮಿ, ಮಂಗಳೂರು ಮಾಧ್ಯಮ ಕೇಂದ್ರದ ನಿರ್ದೇಶಕ ಮತ್ತು ಕಾರ್ಯಾಗಾರದ ಸಂಚಾಲಕರಾದ ಅಬ್ದುಸ್ಸಲಾಮ್ ಪುತ್ತಿಗೆ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا