Urdu   /   English   /   Nawayathi

ರಶ್ಯ ವಹಿವಾಟಿನ ಪರಿಣಾಮ ಭಾರತಕ್ಕೆ ಬೇಗನೆ ಗೊತ್ತಾಗಲಿದೆ: ಟ್ರಂಪ್‌

share with us

ವಾಷಿಂಗ್ಟನ್‌: 11 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ನಿಷೇಧಕ್ಕೆ ಗುರಿಯಾಗಿರುವ ರಶ್ಯದಿಂದ ಭಾರತ ಎಸ್‌ 400 ಕ್ಷಿಪಣಿ ಖರಿದೀಸುವಲ್ಲಿ ಮಾಸ್ಕೋ ದೊಂದಿಗೆ 5 ಶತಕೋಟಿ ಡಾಲರ್‌ ವಹಿವಾಟಿನ ಒಪ್ಪಂದಕ್ಕೆ ಸಹಿ ಹಾಕಿರುವುದರ ಪರಿಣಾಮ ಏನೆಂಬುದನ್ನು ಭಾರತ ಬೇಗನೆ ಅರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಗ್ರರಾಗಿ ಹೇಳಿದ್ದಾರೆ. 

ಈ ವರ್ಷದ ಆದಿಯಲ್ಲಿ 'ಅಮೆರಿಕ  ಪ್ರತಿರೋಧಿಗಳನ್ನು ನಿಷೇಧದ ಮೂಲಕ ಮಟ್ಟ ಹಾಕುವ CAATSA ಕಾಯಿದೆ' ಗೆ ತಿದ್ದುಪಡಿ ಮಾಡಲಾಗಿದೆ. ಅಂತೆಯೇ ನಿಷೇಧಕ್ಕೆ ಗುರಿಯಾಗಿರುವ ರಶ್ಯದೊಂದಿಗೆ ಟ್ರಯಂಫ್ ಯುದ್ಧ ವಿಮಾನಗಳನ್ನು ಖರೀದಿಸಿರುವ ಭಾರತಕ್ಕೆ, ನಿಷೇಧಗಳಿಂದ ವಿನಾಯಿತಿ ನೀಡುವ ಅಧಿಕಾರ ಈಗ ಕೇವಲ ಟ್ರಂಪ್‌ ಕೈಯಲ್ಲಿ ಮಾತ್ರವೇ ಇದೆ. 

ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ  ಬಂದಿದ್ದ ಸಂದರ್ಭದಲ್ಲಿ ಹೊಸದಿಲ್ಲಿ ಎಸ್‌-400 ಟ್ರಯಂಫ್ ಯುದ್ಧ ವಿಮಾನಗಳನ್ನು ರಶ್ಯದಿಂದ ಖರೀದಿಸುವ ಐದು ಶತಕೋಟಿ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. 

ಶ್ವೇತಭವನದ ಓವಲ್‌ ಕಚೇರಿಯಲ್ಲಿ ಪತ್ರಕರ್ತರು ಭಾರತ-ರಶ್ಯ ರಕ್ಷಣಾ ಖರೀದಿ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, "ಭಾರತಕ್ಕೆ ಬೇಗನೆ ರಶ್ಯ ನಿಷೇಧದ ಬಿಸಿ ಏನೆಂಬುದು ಅರಿವಿಗೆ ಬರಲಿದೆ; ನೀವು ಎಣಿಸಿರುವುದಕ್ಕಿಂತಲೂ ಬೇಗನೆ ಭಾರತಕ್ಕೆ ಬಿಸಿ ಮುಟ್ಟಲಿದೆ' ಎಂದು ಹೇಳಿದರು. 

ವಾಷಿಂಗ್ಟನ್‌ : ನಿಷೇಧಕ್ಕೆ ಗುರಿಯಾಗಿರುವ ರಶ್ಯದಿಂದ ಭಾರತ ಎಸ್‌ 400 ಕ್ಷಿಪಣಿ ಖರಿದೀಸುವಲ್ಲಿ ಮಾಸ್ಕೋ ದೊಂದಿಗೆ 5 ಶತಕೋಟಿ ಡಾಲರ್‌ ವಹಿವಾಟಿನ ಒಪ್ಪಂದಕ್ಕೆ ಸಹಿ ಹಾಕಿರುವುದರ ಪರಿಣಾಮ ಏನೆಂಬುದನ್ನು ಭಾರತ ಬೇಗನೆ ಅರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಗ್ರರಾಗಿ ಹೇಳಿದ್ದಾರೆ. 

ಈ ವರ್ಷದ ಆದಿಯಲ್ಲಿ 'ಅಮೆರಿಕ  ಪ್ರತಿರೋಧಿಗಳನ್ನು ನಿಷೇಧದ ಮೂಲಕ ಮಟ್ಟ ಹಾಕುವ CAATSA ಕಾಯಿದೆ' ಗೆ ತಿದ್ದುಪಡಿ ಮಾಡಲಾಗಿದೆ. ಅಂತೆಯೇ ನಿಷೇಧಕ್ಕೆ ಗುರಿಯಾಗಿರುವ ರಶ್ಯದೊಂದಿಗೆ ಟ್ರಯಂಫ್ ಯುದ್ಧ ವಿಮಾನಗಳನ್ನು ಖರೀದಿಸಿರುವ ಭಾರತಕ್ಕೆ, ನಿಷೇಧಗಳಿಂದ ವಿನಾಯಿತಿ ನೀಡುವ ಅಧಿಕಾರ ಈಗ ಕೇವಲ ಟ್ರಂಪ್‌ ಕೈಯಲ್ಲಿ ಮಾತ್ರವೇ ಇದೆ. 

ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ  ಬಂದಿದ್ದ ಸಂದರ್ಭದಲ್ಲಿ ಹೊಸದಿಲ್ಲಿ ಎಸ್‌-400 ಟ್ರಯಂಫ್ ಯುದ್ಧ ವಿಮಾನಗಳನ್ನು ರಶ್ಯದಿಂದ ಖರೀದಿಸುವ ಐದು ಶತಕೋಟಿ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. 

ಶ್ವೇತಭವನದ ಓವಲ್‌ ಕಚೇರಿಯಲ್ಲಿ ಪತ್ರಕರ್ತರು ಭಾರತ-ರಶ್ಯ ರಕ್ಷಣಾ ಖರೀದಿ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, "ಭಾರತಕ್ಕೆ ಬೇಗನೆ ರಶ್ಯ ನಿಷೇಧದ ಬಿಸಿ ಏನೆಂಬುದು ಅರಿವಿಗೆ ಬರಲಿದೆ; ನೀವು ಎಣಿಸಿರುವುದಕ್ಕಿಂತಲೂ ಬೇಗನೆ ಭಾರತಕ್ಕೆ ಬಿಸಿ ಮುಟ್ಟಲಿದೆ' ಎಂದು ಹೇಳಿದರು. 

Read more at https://www.udayavani.com/kannada/news/world-news/330614/india-will-soon-find-out-about-my-decision-on-sanctions-donald-trump-on-s-400-missile-deal-with-russia#7FgeX0p4JeGVZ30k.99

Prayer Timings

Fajr فجر
Dhuhr الظهر
Asr أسر
Maghrib مغرب
Isha عشا