Urdu   /   English   /   Nawayathi

ಇರಾನ್ ಮೇಲೆ ಅಮೆರಿಕ ನಿರ್ಬಂಧ: ಭಾರತಕ್ಕೆ ಸೌದಿಯಿಂದ ಹೆಚ್ಚುವರಿ ಕಚ್ಚಾ ತೈಲ

share with us

ನವದೆಹಲಿ: 10 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಸೌದಿ ಅರೇಬಿಯಾವು ನವೆಂಬರ್‌ನಲ್ಲಿ ಭಾರತಕ್ಕೆ ಹೆಚ್ಚುವರಿಯಾಗಿ 40 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಸಲಿದೆ ಎಂದು ಮೂಲಗಳು ತಿಳಿಸಿವೆ. ಇರಾನ್‌ನಿಂದ ಕಚ್ಚಾ ತೈಲ ಖರೀದಿಗೆ ಅಮೆರಿಕ ಹೇರಿರುವ ನಿರ್ಬಂಧ ನವೆಂಬರ್‌ 4ರಿಂದ ಜಾರಿಗೆ ಬರಲಿದೆ. ಹೀಗಾಗಿ ಪೂರೈಕೆ ಹೆಚ್ಚಿಸಲು ಸೌದಿ ಅರೇಬಿಯಾ ಮುಂದಾಗಿದೆ. ನಿರ್ಬಂಧದ ಹಿನ್ನೆಲೆಯಲ್ಲಿ ಹಲವು ಸಂಸ್ಕರಣಾ ಘಟಕಗಳು ಇರಾನ್‌ನಿಂದ ಕಚ್ಚಾ ತೈಲ ಖರೀದಿ ಸ್ಥಗಿತಗೊಳಿಸುವ ಸುಳಿವು ನೀಡಿವೆ ಎನ್ನಲಾಗಿದೆ. ಇರಾನ್‌ನಿಂದ ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತವು ಚೀನಾದ ನಂತರದ ಸ್ಥಾನದಲ್ಲಿದೆ.

ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಎಂಆರ್‌ಪಿಎಲ್‌ಗಳು ನವೆಂಬರ್‌ನಲ್ಲಿ ಸೌದಿ ಅರೇಬಿಯಾದಿಂದ ಹೆಚ್ಚುವರಿ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಖರೀದಿಸಲು ಬಯಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ಮೂರೂ ಕಂಪೆನಿಗಳು ನಿರಾಕರಿಸಿವೆ.

ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ‘ಸೌದಿ ಅರಮ್ಕೊ’ ಸಹ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا