Urdu   /   English   /   Nawayathi

ಉಸ್ತುವಾರಿ ವೇಣುಗೆ ಅತೃಪ್ತರ ಸಂಭಾಳಿಸುವ ತಲೆನೋವು

share with us

ಬೆಂಗಳೂರು: 09 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಉಪ ಚುನಾವಣೆ ಮೈತ್ರಿ ಸುಸೂತ್ರಗೊಳಿಸುವುದರ ಜತೆಗೆ ಪಕ್ಷದ ಅತೃಪ್ತ ಶಾಸಕರನ್ನು ಸಂಬಾಳಿಸುವ ಸವಾಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಎದುರಾಗಿದೆ. ವಿಧಾನಸಭೆಯ 2 ಹಾಗೂ ಲೋಕಸಭೆಯ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಿತ್ರಪಕ್ಷ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಅಂತಿಮಗೊಳಿಸುವ ಬಗ್ಗೆ ಚರ್ಚಿಸಲು ವೇಣುಗೋಪಾಲ್‌ ಮಂಗಳವಾರ ಸಭೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ಮುಂದೂಡಿಕೆ ಆದ್ದರಿಂದ ಆಕ್ರೋಶಗೊಂಡಿರುವ ಶಾಸಕರುಗಳು ಪಕ್ಷದ ರಾಜ್ಯ ಉಸ್ತುವಾರಿ ಬರುವುದನ್ನೇ ಕಾಯುತ್ತಿದ್ದಾರೆ. ಹಾಗಾಗಿ ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತಿಗೂ ವೇಣುಗೋಪಾಲ್‌ ಕೈಹಾಕುವುದು ಅನಿವಾರ್ಯವಾಗಲಿದೆ. 

ಮಂತ್ರಿಮಂಡಲ ವಿಸ್ತರಣೆ ಮುಂದೂಡಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿನ ಕೆಂಡದ ಸ್ಥಿತಿಯಿದೆ. ಶಾಸಕ ಬಿ.ಸಿ. ಪಾಟೀಲ್‌ ಟ್ವೀಟ್‌ ಮೂಲಕ ಅತೃಪ್ತಿ ಹೊರಹಾಕಿರುವುದೇ ಇದಕ್ಕೆ ಸಾಕ್ಷಿ ಎಂಬಂತಿದೆ. ಭಿನ್ನ ಹಾದಿ ತುಳಿಯುವ ಶಾಸಕರನ್ನು ಹದ್ದುಬಸ್ತಿನಲ್ಲಿಡಲು ಶಿಸ್ತು ಕ್ರಮದ ಎಚ್ಚರಿಕೆಯನ್ನು ವೇಣುಗೋಪಾಲ್‌ ನೀಡುವ ಸಾಧ್ಯತೆಯೂ ಇದೆ. ಜತೆಗೆ ತಕ್ಷಣಕ್ಕೆ ನಿಗಮ ಮಂಡಳಿ ನೇಮಕದ ಭರವಸೆ ಕೊಟ್ಟು ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಬಹುದು ಎಂದು ಹೇಳಲಾಗುತ್ತಿದೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا