Urdu   /   English   /   Nawayathi

ಓಮಾನ್‍ಗೆ 8 ಕೋಟಿ ರೂ. ಮಾದಕ ದ್ರವ್ಯ ಸಾಗಾಟ: ಯುವತಿ ಬಂಧನ

share with us

ಕಾಸರಗೋಡು: 09 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ವಿದೇಶಗಳಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ನಿಷೇಧಿತ ಮಾದಕ ದ್ರವ್ಯ ಹಶಿಶ್ ಸಾಗಿಸುತ್ತಿದ್ದ ಆರೋಪದಲ್ಲಿ ಕನ್ಯಾಕುಮಾರಿಯ ಇಪ್ಪತ್ತೊಂದರ ಹರಯದ ಯುವತಿಯನ್ನು ಅಬಕಾರಿ ಗುಪ್ತಚರ ಇಲಾಖೆ ಅಧಿಕಾರಿಗಳು ಪಾಲಕ್ಕಾಡ್ ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಿಂಧುಜಾ ಎಂದು ಗುರುತಿಸಲಾಗಿದೆ.

ಪ್ಲ್ಯಾಸ್ಟಿಕ ಚೀಲದಲ್ಲಿ ಸುತ್ತಲಾಗಿದ್ದ ಎರಡು ಕೆಜಿ ಹಶಿಶ್ ಅನ್ನು ಈಕೆಯ ವ್ಯಾನಿಟಿ ಬ್ಯಾಗಿನಲ್ಲಿ ಪಾಲಕ್ಕಾಡ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಹಚ್ಚಲಾಯಿತು.

ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ತ್ರಿಶೂರ್ ಗೆ ಮಾದಕ ದ್ರವ್ಯ ಸಾಗಿಸಲಾಗುತ್ತಿತ್ತು. ತ್ರಿಶೂರ್ ನಲ್ಲಿರುವ ಮೊಹ್ಮದ್ ಜಬೀನ್ ಎಂಬಾತನಿಗೆ ನೀಡಲು ಸಿಂಧುಜಾ ತೆರಳುತ್ತಿದ್ದಳು. ಆತ ಅದನ್ನು ಓಮಾನ್‍ ದೇಶದಲ್ಲಿ ಮಾರಾಟ ಮಾಡಲು ಒಯ್ಯುವವನಿದ್ದ.

ಈ ರೀತಿ ಒಟ್ಟು ಹದಿನೇಳು ಬಾರಿ ವಿಶಾಖ ಪಟ್ಟಣದಿಂದ ತ್ರಿಶೂರ್ ಗೆ ಮಾದಕ ದ್ರವ್ಯ ಸಾಗಿಸಿದ್ದು, ಒಮ್ಮೆ ಸಾಗಿಸಿದರೆ ತನಗೆ ಒಂದು ಲಕ್ಷ ರೂ. ನೀಡಲಾಗುತ್ತಿತ್ತು ಎಂದು ಆರೋಪಿ ತನಿಖೆ ಸಂದರ್ಭ ಹೇಳಿದ್ದಾಳೆ.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا