Urdu   /   English   /   Nawayathi

ಗೋವಾ ಶಾಸಕನ ಪುತ್ರ ಅರೆಸ್ಟ್

share with us

ಬೆಳಗಾವಿ: 09 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಕಾರು ಡಿಕ್ಕಿಹೊಡೆದು ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗೋವಾ ಶಾಸಕ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ಅವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ನಗರ ರಾಷ್ಟ್ರೀಯ ಹೆದ್ದಾರಿ 4ರ ಹಣ್ಣಿನ ಮಾರ್ಕೆಟ್ ಬಳಿ ಅಪಘಾತ ಸಂಭವಿಸಿತ್ತು. ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ ಯುವತಿ ತಾಹಿನಿಯತ್ ಬಿಸ್ಟಿಗೆ ಕೈಲ್ ಟಿಕ್ಲೋ ಅವರ ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಅಪಘಾತವಾದ ಕೂಡಲೇ ಕೈಲ್ ಟಿಕ್ಲೋ ಪರಾರಿಯಾಗಿದ್ದರು. ಸಿಟ್ಟಿಗೆದ್ದ ಸ್ಥಳೀಯರು ಕಾರಿಗೆ ಬೆಂಕಿ ಹಚ್ಚಿದ್ದರು. ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಇಂದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಶಾಸಕರ ಪುತ್ರ ಕೈಲ್ ಟಿಕ್ಲೋ ಮಾಳಮಾರುತಿ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا