Urdu   /   English   /   Nawayathi

ಗುಜರಾತ್‍ನಲ್ಲಿ 342 ಜನರು ಅರೆಸ್ಟ್, ಕಾರಣವೇನು ಗೊತ್ತೇ..?

share with us

ಅಹಮದಾಬಾದ್: 08 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಗುಜರಾತ್‍ನ ಸಬರ್‍ಕಾಂತ್ ಜಿಲ್ಲೆಯ ಹಿಮ್ಮತ್ ನಗರದ ಬಳಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ನಡೆದ ಅತ್ಯಾಚಾರ ಮತ್ತು ಆನಂತರ ವಲಸಿಗರ ಮೇಲೆ ನಡೆದ ಹಲ್ಲೆ ಪ್ರಕರಣಗಳ ಸಂಬಂಧ ಪೊಲೀಸರು ಈವರೆಗೆ 342 ಜನರನ್ನು ಬಂಧಿಸಿದ್ದಾರೆ.

ಹಸುಳೆ ಮೇಲೆ ಸೆ.28ರಂದು ನಡೆದ ಅತ್ಯಾಚಾರ ಪ್ರಕರಣದ ಸಂಬಂಧ ಬಿಹಾರ ಮೂಲದ ರವೀಂದ್ರ ಸಾಹು ಎಂಬಾತನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ನಂತರ ವಾಟ್ಸ್‍ಆ್ಯಪ್‍ನಲ್ಲಿ ವಲಸಿಗರ ವಿರುದ್ಧ ಸೇಡಿನ ಪ್ರಚೋದನಾತ್ಮಕ ಸಂದೇಶಗಳು ಹರಿದಾಡುತ್ತಿದೆ. ಇದರಿಂದಾಗಿ ಗುಜರಾತ್‍ನ ಅನೇಕ ಕಡೆ ವಲಸಿಗರ ಮೇಲೆ ದಾಳಿಯಾಗುತ್ತಿವೆ ಬಿಹಾರ ಮತ್ತು ಉತ್ತರಪ್ರದೇಶ ಮೂಲದವರನ್ನು ಗುರಿಯಾಗಿಟ್ಟುಕೊಂಡು ಹಲ್ಲೆಯಂಥ ಆಕ್ರಮಣಗಳು ನಡೆಯುತ್ತಿವೆ. ಈ ಸಂಬಂಧ ಇಲ್ಲಿಯವರೆಗೂ ಗುಜರಾತ್ ಪೊಲೀಸರು 342 ಜನರನ್ನು ಬಂಧಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಗು ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದ್ದು, ಠಾಕೂರ್ ಸೇನಾ ಸಂಘಟನೆಯ ಕಾರ್ಯಕರ್ತರು ಬಿಹಾರಿಗಳು ಮತ್ತು ಉತ್ತರಪ್ರದೇಶದವನ್ನು ಹುಡುಕಿ ಹಲ್ಲೆ ಮಾಡುತ್ತಿದ್ದಾರೆ. ಅ.2ರಂದು ಮೆಹ್ಸಾನ್ ಜಿಲ್ಲೆಯ ಕೈಗಾರಿಕೆಯೊಂದಕ್ಕೆ ನುಗ್ಗಿದ ಜನರ ಗುಂಪೊಂದು ಅಲ್ಲಿನ ಇಬ್ಬರು ಹೊರ ರಾಜ್ಯದ ನೌಕರರನ್ನು ಥಳಿಸಿದ್ದಾರೆ. ವಲಸಿಗರ ಮನೆಗಳಿಗೆ ನುಗ್ಗಿ ನಾಳೆಯೇ ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا