Urdu   /   English   /   Nawayathi

ಏರಿಂಡಿಯಾದಿಂದ 5,000 ಕೋಟಿ ಬಾಕಿ: ವೈಮಾನಿಕ ಇಂಧನ ಪೂರೈಕೆ ಅಮಾನತು

share with us

ಹೊಸದಿಲ್ಲಿ: 08 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಏರಿಂಡಿಯಾ ವಿಮಾನ ಸಂಸ್ಥೆ ತೈಲ ಮಾರಾಟ ಕಂಪೆನಿಗಳಿಗೆ 5,000 ಕೋಟಿ ರೂ. ಪಾವತಿ ಬಾಕಿ ಇರಿಸುವ ಕಾರಣಕ್ಕೆ ತೈಲ ಮಾರಾಟ ಸಂಸ್ಥೆಗಳು ಏರಿಂಡಿಯಾ ಸಂಸ್ಥೆಯ ದೇಶೀಯ ಹಾರಾಟದ ವಿಮಾನಗಳಿಗೆ ವೈಮಾನಿಕ ಇಂಧನ ಪೂರೈಕೆಯನ್ನು (ಎಟಿಎಫ್) ಅಮಾನತುಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. ಏರಿಂಡಿಯಾ ವಿಮಾನಯಾನ ಸಂಸ್ಥೆಯ ದೇಶೀಯ ವಿಮಾನ ಹಾರಾಟದ ಎಂಟು ಪ್ರಮುಖ ತಾಣಗಳಾಗಿರುವ ಮೊಹಾಲಿ, ಪಟ್ನಾ, ಪುಣೆ, ತಿರುವನಂತಪುರ, ಲಕ್ನೋ, ವಿಶಾಖಪಟ್ಟಣ, ಕೊಯಮುತ್ತೂರು ಮತ್ತು ಜೈಪುರ ಕ್ಕೆ ತೈಲ ಮಾರಾಟ ಸಂಸ್ಥೆಗಳು ವೈಮಾನಿಕ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿರುವುದಾಗಿ ಮೂಲಗಳು ಬಹಿರಂಗಪಡಿಸಿವೆ. ಇಂದು ಸೋಮವಾರ ಸಂಜೆ 4 ಗಂಟೆಯ ಬಳಿಕದಲ್ಲಿ  ಎಟಿಎಫ್ ಪೂರೈಕೆ ಅಮಾನತು ನಿರ್ಧಾರ ಜಾರಿಗೆ ಬಂದಿರುವುದಾಗಿ ವರದಿಯಾಗಿದೆ. 

ಏರಿಂಡಿಯಾ ಸಂಸ್ಥೆ ತೈಲ ಮಾರಾಟ ಕಂಪೆನಿಗಳಿಗೆ ಒಟ್ಟು 5,000 ಕೋಟಿ ರೂ. ಪಾವತಿಯನ್ನು ಬಾಕಿ ಇರಿಸಿದೆ. ಈ ಸಂಬಂಧ ಅದು ದಿನಂಪ್ರತಿ 20 ಕೋಟಿ ರೂ.ಗಳನ್ನು ಪಾವತಿಸುತ್ತಿದೆ. ಹಾಗಿದ್ದರೂ ಏರಿಂಡಿಯಾ ಮಾಡುತ್ತಿರುವ ದೈನಂದಿನ 20 ಕೋಟಿ ರೂ. ಪಾವತಿ ಕೂಡ ಕ್ರಮಬದ್ಧವಾಗಿಲ್ಲ. ಹಾಗಾಗಿ ಎಟಿಎಫ್ ಪೂರೈಕೆಯನ್ನು  ತೈಲ ಮಾರಾಟ ಕಂಪೆನಿಗಳು ಅಮಾನತುಗೊಳಿಸಿವೆ. 

ಈ ನಡುವೆ ಏರಿಂಡಿಯಾ ಸಂಸ್ಥೆ ತನಗೆ ತತ್‌ಕ್ಷಣಕ್ಕೆ 2,000 ಕೋಟಿ ರೂ. ಬಂಡವಾಳ ಒದಗಿಸುವಂತೆ ಕೇಂದ್ರ ಸರಕಾರವನ್ನು ಸಂಪರ್ಕಿಸಿರುವುದಾಗಿ ತಿಳಿದು ಬಂದಿದೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا