Urdu   /   English   /   Nawayathi

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ 'ಕೈ'ಗೆ ಅಧಿಕಾರ, ಬಿಜೆಪಿಗೆ ಮುಖಭಂಗ: ಸಮೀಕ್ಷೆ

share with us

ನವದೆಹಲಿ: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನೆಡೆ ಅನುಭವಿಸಲಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌ ನಡೆಸಿದ ಜನಮತ ಸಮೀಕ್ಷೆ ತಿಳಿಸಿದೆ. ಎಬಿಪಿ ಸಮೀಕ್ಷೆ ಪ್ರಕಾರ, ಪ್ರಸ್ತುತ ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಒಟ್ಟು 200 ಸ್ಥಾನಗಳ ಪೈಕಿ 142 ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ. ಬಿಜೆಪಿ ಸಂಖ್ಯಾಬಲ 56 ಸ್ಥಾನಗಳಿಗೆ ಕುಸಿಯಲಿದೆ. ಮತ ಹಂಚಿಕೆಯಲ್ಲೂ ಕಾಂಗ್ರೆಸ್‌ ಶೇ. 50ರಷ್ಟು ಮುಂದಿರಲಿದ್ದು, ಬಿಜೆಪಿ ಶೇ. 34ಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.

ಇನ್ನು 230 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ 122 ಸ್ಥಾನ ಗೆದ್ದು ಸರಳ ಬಹುಮತ ಪಡೆಯಲಿದೆ. ಈ ಮೂಲಕ ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯಗೊಳ್ಳಲಿದೆ ಎಂದು ಸಮೀಕ್ಷೆ ವಿವರಿಸಿದೆ.

ಮಧ್ಯ ಪ್ರದೇಶದಲ್ಲಿ ಬಿಜೆಪಿ 108 ಸ್ಥಾನಗಳನ್ನಷ್ಟೇ ಪಡೆಯಲಿದೆ. ರಾಜ್ಯದಲ್ಲಿ ಮತಹಂಚಿಕೆ ಪ್ರಮಾಣದಲ್ಲಿ ಎರಡೂ ಪಕ್ಷಗಳ ನಡುವೆ ಶೆ. 0.7ರಷ್ಟು ಮಾತ್ರ ವ್ಯತ್ಯಾಸವಿರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಛತ್ತೀಸ್ ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದೆ. ಬಿಜೆಪಿ ಗೆಲುವು 40 ಕ್ಷೇತ್ರಗಳಿಗೆ ಸೀಮಿತವಾಗಲಿದೆ. ಇಲ್ಲೂ ಸಹ ಕಾಂಗ್ರೆಸ್‌-ಬಿಜೆಪಿ ನಡುವೆ ಮತ ಹಂಚಿಕೆ ಕೇವಲ ಶೇ. 0.3ರಷ್ಟು ಮಾತ್ರ ವ್ಯತ್ಯಾಸವಾಗಲಿದೆ ಎಂದು ಎಬಿಪಿ ಭವಿಷ್ಯ ನುಡಿದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا