Urdu   /   English   /   Nawayathi

ಗಡಿಪಾರಾದ ರೋಹಿಂಗ್ಯಾಗಳಿಗೆ ಮರಣ ದಂಡನೆ?;ನಿರಾಶ್ರಿತರ ತೀವ್ರ ಆತಂಕ

share with us

ಹೊಸದಿಲ್ಲಿ:  07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರತ ಗಡೀಪಾರು ಮಾಡಿರುವ  ಏಳು ಮಂದಿ ರೊಹಿಂಗ್ಯಾಗಳಿಗೆ ಮ್ಯಾನ್‌ಮಾರ್‌ ಆಡಳಿತ ಮರಣದಂಡನೆ ಶಿಕ್ಷೆ ವಿಧಿಸುವ ಆತಂಕವನ್ನು ನಿರಾಶ್ರಿತರು ಹೊರ ಹಾಕಿದ್ದಾರೆ. ದೆಹಲಿಯ ಕಾಲಿಂದಿ ಕುಂಜ್‌ನಲ್ಲಿರುವ ನಿರಾಶ್ರಿತರು ದಯವಿಟ್ಟು ಮ್ಯಾನ್‌ಮಾರ್‌ನಲ್ಲಿ ಶಾಂತಿ ನೆಲೆಸುವವರೆಗೆ ನಮ್ಮನ್ನು ಗಡಿ ಪಾರು ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಈಗಾಗಲೆ ಮುಸ್ಲಿಂ ಅಲ್ಪಸಂಖ್ಯಾಕರ ವಿರುದ್ಧ ಜನಾಂಗೀಯ ಹತ್ಯೆಯಲ್ಲಿ ನಿರತವಾಗಿರುವ ಆರೋಪಕ್ಕೆ ಗುರಿಯಾಗಿರುವ ಮ್ಯಾನ್‌ಮಾರ್‌ ಮಿಲಿಟರಿಯ ಕೈಯಲ್ಲಿ  ಗಡೀಪಾರುಗೊಂಡಿರುವ ಈ ರೊಹಿಂಗ್ಯಾಗಳ ಭದ್ರತೆ ಮತ್ತು ಸುರಕ್ಷೆಗೆ ಅಪಾಯ ಇರುವ ಬಗ್ಗೆ ವಿಶ್ವಸಂಸ್ಥೆ ಭೀತಿ ವ್ಯಕ್ತಪಡಿಸಿತ್ತು. 

2012ರಲ್ಲಿ ಭಾರತದೊಳಗೆ ಅಕ್ರಮವಾಗಿ ನುಸುಳಿ ಬಂದಿದ್ದ 7 ಮಂದಿ ರೊಹಿಂಗ್ಯಾಗಳನ್ನು ಕಳೆದ ಮಂಗಳವಾರ ಈಶಾನ್ಯ ರಾಜ್ಯವಾಗಿರುವ ಮಣಿಪುರದ ಗಡಿಯಲ್ಲಿ ಭಾರತೀಯ ಅಧಿಕಾರಿಗಳು ಮ್ಯಾನ್‌ಮಾರ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا