Urdu   /   English   /   Nawayathi

ಹರಾಜಾದ ಮರುಕ್ಷಣವೇ ಕಲಾಕೃತಿ ಚೂರು

share with us

ಲಂಡನ್‌: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ತನ್ನ ಕಲಾಕೃತಿಗಳ ಪ್ರದರ್ಶನದ ವೇಳೆ ಸದಾ ಒಂದಿಲ್ಲೊಂದು ಸ್ಟಂಟ್‌ ಮಾಡುವ ಬ್ರಿಟನ್‌ನ ಅಜ್ಞಾತ ಕಲಾವಿದನೆಂದೇ ಪರಿಗಣಿಸಲ್ಪಟ್ಟಿರುವ ಬಾಂಕಿ, ಲಂಡನ್‌ನ ಸೋತಿಸ್‌ನಲ್ಲಿ ಗುರುವಾರ ನಡೆದ ಕಲಾಕೃತಿ ಪ್ರದರ್ಶನ-ಕಂ-ಮಾರಾಟದ ವೇಳೆ ತಮ್ಮ "ಗರ್ಲ್ ವಿತ್‌ ಬಲೂನ್‌' ಎಂಬ ಕಲಾಕೃತಿ ಕೋಟಿಗಟ್ಟಲೆ ರೂ.ಗಳಿಗೆ ಮಾರಾಟವಾದರೂ, ಮಾರಾಟವಾದ ಕೆಲವೇ ನಿಮಿಷಗಳಲ್ಲಿ ಆ ಕಲಾಕೃತಿಯನ್ನು ಚೂರುಚೂರು ಮಾಡಿದ್ದಾರೆ. 

ಅಸಲಿಗೆ, ಇದೊಂದು ಸ್ವಯಂ ನಾಶ ಹೊಂದುವಂಥ (ಸೆಲ್ಫ್-ಡಿಸ್ಟ್ರಕ್ಷನ್‌) ಕಲಾಕೃತಿ ಆಗಿದ್ದು, ಅದರಲ್ಲಿ ಬಾಲಕಿಯೊಬ್ಬಳು ಕೆಂಪು ಬಣ್ಣದ, ಹೃದಯಾಕಾರದ ಬಲೂನನ್ನು ಹಿಡಿಯಲು ಕೈಚಾಚಿರುವ ಚಿತ್ರವಿತ್ತು. ಈ ಕಲಾಕೃತಿಯ ಸುಂದರ ಚೌಕಟ್ಟಿನ ಕೆಳಭಾಗದ ಕಟ್ಟಿನಲ್ಲಿ ಸೂಕ್ಷ್ಮ ಬ್ಲೇಡುಗಳುಳ್ಳ ಯಂತ್ರವನ್ನು ಅಳವಡಿಸಲಾಗಿತ್ತು. ಇದು ಬಾಂಕಿಗೆ ಬಿಟ್ಟರೆ ಬೇರ್ಯಾರಿಗೂ ತಿಳಿದಿರಲಿಲ್ಲ. 

ಹರಾಜಿನ ವೇಳೆ ಈ ಕಲಾಕೃತಿ 10.40 ಕೋಟಿ ರೂ.ಗಳಿಗೆ ಮಾರಾಟವಾಯಿತು. ಆದರೆ, ಮಾರಾಟವಾದ ಕೆಲವು ಸೆಕೆಂಡ್‌ಗಳಲ್ಲೇ ಇದ್ದಕ್ಕಿದ್ದಂತೆ ಚೌಕಟ್ಟಿನೊಳಗಿದ್ದ ಬಾಲಕಿಯ ಚಿತ್ರ ಫ್ರೆಮಿನ ಕೆಳಭಾಗಕ್ಕೆ ನಿಧಾನವಾಗಿ ಚಲಿಸತೊಡಗಿ, ಫ್ರೇಮಿನಿಂದ ಹೊರ ಬರುವಾಗ ನೀಳವಾಗಿ ಕಟಾವು ಆಗಿ ಹೊರಬಂತು. ಈ ಮೂಲಕ ಬಾಂಕಿ, ತಮ್ಮ ಎಂದಿನ ವಿಶೇಷತೆಯನ್ನು ಈ ಬಾರಿಯ ಹರಾಜು ವೇಳೆಯಲ್ಲೂ ಕಾಯ್ದುಕೊಂಡಿದ್ದಾರೆ.

https://www.youtube.com/watch?v=uL1uZMj0VX8

ಉ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا