Urdu   /   English   /   Nawayathi

ದ್ವೀಪ ರಾಷ್ಟ್ರ ಹೈಟಿಯಲ್ಲಿ ಭೂಕಂಪ, 13 ಮಂದಿ ಸಾವು

share with us

ಪೋರ್ಟ್-ಔ-ಫ್ರಿನ್ಸ್: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ದ್ವೀಪ ರಾಷ್ಟ್ರ ಹೈಟಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೂಕಂಪದಿಂದಾಗಿ 13 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಯಿಂದಾಗಿ ಕೆಲವರು ನಾಪತ್ತೆಯಾಗಿದ್ದು, ಕಟ್ಟಡಗಳಿಗೆ ಹಾನಿಯಾಗಿವೆ. ಕೆರಿಬಿಯನ್ ದ್ವೀಪರಾಷ್ಟ್ರದಲ್ಲಿ 5.9 ತೀವ್ರತೆಯ ಭೂಕಂಪ ದಾಖಲಾಗಿದೆ. ಅರ್ಥ್‍ಕ್ವೆಕ್ ಕೇಂದ್ರ ಬಿಂದು ಪೋರ್ಟ್-ಡಿ-ಪಿಯಾಕ್ಸ್ ಪಟ್ಟಣದಿಂದ ನೈರುತ್ಯಕ್ಕೆ 19 ಕಿ.ಮೀ.ದೂರದಲ್ಲಿತ್ತು. ಈವರೆಗೆ 13 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ವಕ್ತಾರ ಎಡ್ಡಿ ಜಾಕ್ಸನ್ ಅಲೆಕ್ಸಿಸ್ ಹೇಳಿದ್ದಾರೆ.

Earthquake--05

ಎಂಟು ವರ್ಷದ ಹಿಂದೆ ಇದೇ ದೇಶದಲ್ಲಿ ಸಂಭವಿಸಿದ ಭಾರೀ ಭೂ ಕಂಪನದಲ್ಲಿ ಕನಿಷ್ಠ ಎರಡು ಲಕ್ಷ ಮಂದಿ ಸಾವನ್ನಪ್ಪಿದ್ದರು. ಮೂರು ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಕಹಿ ನೆನಪು ಇಲ್ಲಿನ ಜನರನ್ನು ಈಗಲೂ ಕಾಡುತ್ತಿದೆ. ಸಂಯಮದಿಂದ ಇರುವಂತೆ ಹೈಟಿಯ ಅಧ್ಯಕ್ಷ ಜೊವೆನೆಲ್ ಮಾಯ್ಸ್ ಜನರನ್ನು ಮನವಿ ಮಾಡಿದ್ದಾರೆ. ನೆರವಿನ ಅಗತ್ಯ ಇರುವವರಿಗೆ ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ ಎಂದು ಕೂಡ ಹೇಳಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನಡೆಯುತ್ತಿದೆ.

Earthquake--04

Earthquake--03

Earthquake--02

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا