Urdu   /   English   /   Nawayathi

ಅತಿಸೂಕ್ಷ್ಮ ಚಿಪ್‌ನಿಂದ ಅ್ಯಪಲ್‌, ಅಮೆಜಾನ್‌ & ಅಮೆರಿಕ ಸರಕಾರದ ಪಿಸಿಗಳನ್ನು ಹ್ಯಾಕ್‌ ಮಾಡಿದ ಚೀನಾ?

share with us

ವಾಷಿಂಗ್ಟನ್‌: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಚೀನಾ ಮೂಲದ ಹ್ಯಾಕರ್‌ಗಳು ಅ್ಯಪಲ್‌, ಅಮೆಜಾನ್‌ಮತ್ತು ಅಮೆರಿಕ ಸರಕಾರದ ಹಲವು ಕಾಂಟ್ರಾಕ್ಟರ್‌ಗಳ ಮಾಹಿತಿಯನ್ನು ಅತಿಸೂಕ್ಷ್ಮ ಚಿಪ್‌ ಮೂಲಕ ಕದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಅಮೆರಿಕದ ತನಿಖಾ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿದೆ. ಈ ಮೈಕ್ರೋ‌ ಚಿಪ್‌ಗಳು ಪೆನ್ಸಿಲ್‌ನ ತುದಿಯಷ್ಟಿದ್ದು, 'ಸೂಪರ್‌ ಮೈಕ್ರೋ' ಕಂಪ್ಯೂಟರ್‌ಗಳ ಮದರ್‌ಬೋರ್ಡ್‌ನಲ್ಲಿ ಅಳವಡಿಸಲಾಗಿದ್ದು, ಅಲ್ಲಿಂದ ನೇರವಾಗಿ ಬಳಕೆದಾರರ ಡಾಟಾ ಕದಿಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ತೈವಾನ್‌ ಮತ್ತು ಅಮೆರಿಕದ ಕಂಪನಿಗಳು ಜಂಟಿಯಾಗಿ ಸಿದ್ಧ ಪಡಿಸಿದ ಸೂಪರ್‌ ಮೈಕ್ರೋ ಸಿಸ್ಟಮ್‌ಗಳನ್ನು ಅಮೇಜಾನ್‌ ವೆಬ್‌ ಸರ್ವಿಸ್‌ ಮತ್ತು ಆ್ಯಪಲ್‌ ಕಂಪನಿಗಳು ಸೇರಿದಂತೆ ಅಮೆರಿಕದ ಕಂಪನಿಗಳು ಖರೀದಿಸಿ ಬಳಕೆ ಮಾಡಿವೆ ಎನ್ನಲಾಗಿದೆ. 

ಈ ಬಗ್ಗೆ ವರದಿ ಮಾಡಿರುವ ಬ್ಲೂಮ್‌ಬರ್ಗ್‌ ವೀಕ್‌, ಹ್ಯಾಕರ್‌ಗಳಿಗೆ ಗ್ರಾಹಕರ ಮಾಹಿತಿಯನ್ನು ಕದಿಯಲಾಗಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ತಿಳಿಸಿದೆ. ಈ ನಡುವೆ ಚೀನಾದ ಹ್ಯಾಕರ್‌ಗಳು ಅಮೆರಿಕದ ಕಚೇರಿಗಳಿಂದ ಡಾಟಾ ಕದಿಯಲು ಅತ್ಯಂತ ಸೂಕ್ಷ್ಮವಾದ ಮೈಕ್ರೋ ಚಿಪ್‌ಗಳನ್ನು ಬಳಕೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ವ್ಯಾಪಾರ ವಹಿವಾಟಿನ ರಹಸ್ಯಗಳನ್ನು ತಿಳಿದುಕೊಳ್ಳುವುದೇ ಹ್ಯಾಕರ್‌ಗಳ ಉದ್ದೇಶ ಎನ್ನಲಾಗಿದೆ. 

ಡಾಟಾ ಸೋರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಅಮೆರಿಕದ ಕಂಪೆನಿಗಳ ವಿರುದ್ಧ ಚೀನಾ ಹ್ಯಾಕರ್‌ಗಳು ನಡೆಸಿದ ವ್ಯವಸ್ಥಿತ ಸೈಬರ್‌ ದಾಳಿ ಎಂದಿದ್ದಾರೆ. 

ಡಾಟಾ ಸೋರಿಕೆ ವಿಚಾರವನ್ನು ಅಲ್ಲಗಳೆದಿರುವ ಆ್ಯಪಲ್‌, ಅಂತಹ ಯಾವುದೇ ಬೆಳವಣಿಗೆ ಸಂಭವಿಸಿಲ್ಲ. ಈ ವಿಚಾರವಾಗಿ ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಷನ್‌ (ಎಫ್‌ಬಿಐ)ಅನ್ನು ಸಂಪರ್ಕಿಸಿಲ್ಲ. ಎಫ್‌ಬಿಐ ತನಿಖೆ ನಡೆಸುತ್ತಿರುವ ವಿಚಾರ ಗೊತ್ತಿಲ್ಲ ಎಂದಿದೆ. 

ಅಂತಹ ಅನುಮಾನಸ್ಪದ ಚಿಪ್‌ಗಳ ಪತ್ತೆಗೆ ಎಫ್‌ಬಿಐ ಜತೆ ಸಹಕರಿಸುವುದಾಗಿ ಅಮೆಜಾನ್‌ ತಿಳಿಸಿದೆ. ಸಧ್ಯಕ್ಕೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا