Urdu   /   English   /   Nawayathi

ಅಲಹಾಬಾದ್‌ ವಿವಿ ಹಾಸ್ಟೆಲ್‌ ಕೋಣೆಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

share with us

ಅಲಹಾಬಾದ್‌: 06 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಚುನಾವಣಾ ಫ‌ಲಿತಾಂಶ ನಿನ್ನೆ ಪ್ರಕಟವಾದ ಬೆನ್ನಿಗೇ ನಡು ರಾತ್ರಿಯ ವೇಳೆಗೆ ಚುನಾವಣೆಯಲ್ಲಿ ಗೆದ್ದ  ವಿದ್ಯಾರ್ಥಿಗಳ ಕೋಣೆಗಳ ಸಹಿತ ಹಾಸ್ಟೆಲ್‌ ನ ಹಲವು ಕೋಣೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ವರದಿಯಾಗಿದೆ.

ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಗೆದ್ದ ಸಮಾಜವಾದಿ ಪಕ್ಷದ ಉದಯ್‌ ಪ್ರಕಾಶ್‌ ಯಾದವ್‌, ಇನ್ನೋರ್ವ ಅಭ್ಯರ್ಥಿ ಅವಿನಾಶ್‌ ಯಾದವ್‌ ಸೇರಿದಂತೆ ಹಲವರ ಕೋಣೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿದರು. 

ಹಾಸ್ಟೆಲ್‌ ರೂಮುಗಳಿಗೆ ಬೆಂಕಿ ಹಚ್ಚಿದ ಬಳಿಕ ದುಷ್ಕರ್ಮಿಗಳು ಬಾಂಬುಗಳನ್ನು ಕೂಡ ಎಸೆದರು. 

ಕರ್ನಲ್‌ ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯೊಳಗೆ ಈ ಘಟನೆ ನಡೆದಿದೆ. ಸುದ್ದಿ ತಿಳಿದಾಕ್ಷಣ ಹಲವು ಅಗ್ನಿ ಶಾಮಕಗಳನ್ನು ಸ್ಥಳಕ್ಕೆ ರವಾನಿಸಲಾಯಿತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا