Urdu   /   English   /   Nawayathi

ಕ್ರಿಮಿನಲ್'ಗಳನ್ನು ಮಟ್ಟಹಾಕುವ ಇಂಟರ್'ಪೋಲ್ ಮುಖ್ಯಸ್ಥರೇ ನಾಪತ್ತೆ: ಚೀನಾ ಮೌನ!

share with us

ಬೀಜಿಂಗ್: 06 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ವಿಶ್ವದ ಯಾವುದೇ ದೇಶ ಸಂಕಷ್ಟದಲ್ಲಿದ್ದರೂ ಕೈ ಹಿಡಿಯುವ ಅಂತರಾಷ್ಟ್ರೀ ಪೊಲೀಸ್ ಕಾರ್ಪೊರೇಷನ್ (ಇಂಟರ್'ಪೋಲ್) ಇದೀಗ ತಾನೇ ಸಂಕಷ್ಟಕ್ಕೆ ಸಿಲುಕಿದ್ದು, ಫ್ರಾನ್ಸ್ ನಿಂದ ಚೀನಾಗೆ ಹೋಗಿದ್ದ ಇಂಟರ್'ಪೋಲ್ ಮುಖ್ಯಸ್ಥರೇ ನಾಪತ್ತೆಯಾಗಿದ್ದಾರೆ. ಇಂಟರ್ ಪೋಲ್ ಮುಖ್ಯಸ್ಥ ಮೆಂಗ್ ಹಾಂಗ್'ವೇ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಇಂಟರ್ ಪೋಲ್'ನ ಪ್ರಧಾನ ನೆಲೆಯಿರುವ ಲಯೋನ್ ನಿಂದ ಹೊರಟ ಬಳಿಕ ಮೆಂಗ್ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. 

ಇತರೆ ದೇಶಗಳಲ್ಲಿ ಅಪರಾಧ ಕೃತ್ಯಗಳಾದಾಗ ಕೂಡಲೇ ಕಾರ್ಯಪ್ರವೃತ್ತರಾಗಿ ಸಹಾಯ ಮಾಡುವ ಇಂಟರ್ ಪೋಲ್ ಮುಖ್ಯಸ್ಥರೇ ನಾಪತ್ತೆಯಾಗಿರುವುದು ಇದೀಗ ಹಲವು ಚರ್ಚೆಗೆ ಕಾರಣವಾಗಿದೆ. 

ಫ್ರಾನ್ಸ್ ಪೊಲೀಸರು ಮೆಂಗ್ ಹಾಂಗೇ'ವೇ ಅವರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದು, ಇದಕ್ಕಾಗಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. 

ಕಳೆದ 10 ದಿನಗಳಿಂದ ಪತಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹಾಂಗ್'ವೇ ಅವರ ಪತ್ನಿ ಹೇಳಿಕೊಂಡಿದ್ದಾರೆ. ಹಾಂಗ್ ವೇ ಅವರು ಫ್ರಾನ್ಸ್ ನಲ್ಲಿ ಇಲ್ಲ ಎಂಬುದನ್ನು ಫ್ರೆಂಚ್ ಹಿರಿಯ ಆಧಿಕಾರಿಗಳು ದೃಢಪಡಿಸಿದ್ದಾರೆ. 

ಹಾಂಗ್ ಅವರು ನಾಪತ್ತೆಯಾಗಿ ಹಲವು ದಿನಗಳೇ ಕಳೆದರೂ ಫ್ರೆಂಚ್ ಹಾಗಾ ಚೀನಾ ಮಾತ್ರ ಮೌನ ತಾಳಿದ್ದು, ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನೂ ನೀಡಿಲ್ಲ. 

2016ರ ನವೆಂಬರ್ ತಿಂಗಳಿನಲ್ಲಿ ಹಾಂಗ್'ವೇ ಇಂಟರ್ ಪೋಲ್ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಹಾಂಗ್ ವೇ ಅವರ ಪದವಿಯನ್ನು ಬಳಸಿಕೊಕಂಡು ದಮನಿತರ ಮೇಲೆ ಹರಿಹಾಯಲು ಚೀನಾ ಮುಂದಾಗಬಹುದು ಎಂದು ಮಾನವ ಹಕ್ಕುಗಳ ಹೋರಾಟಗಾರರು ಆ ಸಂದರ್ಭದಲ್ಲಿ ಆತಂಕವನ್ನೂ ವ್ಯಕ್ತಪಡಿಸಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا