Urdu   /   English   /   Nawayathi

ಪಾಕಿಸ್ತಾನ: ಅಣ್ಣ ಷರೀಫ್ ಬಂಧಮುಕ್ತಗೊಳ್ಳುತ್ತಿದ್ದಂತೆ ತಮ್ಮ ಷರೀಫ್ ಬಂಧನ!

share with us

ಇಸ್ಲಾಮಾಬಾದ್: 06 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ವಸತಿ ಹಗರಣ ಪ್ರಕರಣದಲ್ಲಿ ಪಾಕಿಸ್ತನದ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)  ಅಧ್ಯಕ್ಷ, ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ನ್ನು ಬಂಧಿಸಲಾಗಿದೆ. ಸುಮಾರು 14 ಬಿಲಿಯನ್ ರೂಪಾಯಿ ಮೌಲ್ಯದ ವಸತಿ ಹಗರಣದ ತನಿಖೆ ನಡೆಸುತ್ತಿದ್ದ ಭ್ರಷ್ಟಾಚರ ನಿಗ್ರಹ ವಿಭಾಗ ಶೆಹಬಾಜ್ ಷರೀಫ್ ನ್ನು ಬಂಧಿಸಿದೆ. ಈ ಬಗ್ಗೆ ನ್ಯಾಷನಲ್ ಅಕೌಂಟೆಬಲಿಟಿ ಬ್ಯೂರೋ(ಎನ್ಎಬಿ) ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಂಸತ್ ನಲ್ಲಿ ವಿಪಕ್ಷ ನಾಯಕನಾಗಿರುವ ಶೆಹಬಾಜ್ ಷರೀಫ್ ಅವರು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ಲಾಹೋರ್ ನಲ್ಲಿ ಅಶಿಯಾನಾ ವಸತಿ ಯೋಜನೆಯಲ್ಲಿ ಅಕ್ರಮಗಳನ್ನು ಎಸಗಿರುವ ಆರೋಪ ಕೇಳಿಬಂದಿದೆ. 

ಬಡವರಿಗೆ ವಸತಿ ಕಲ್ಪಿಸಲು ಉದ್ದೇಶಿಸಲಾಗಿದ್ದ ಯೋಜನೆ ಭ್ರಷ್ಟಾಚಾರದಿಂದಾಗಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ವಿಭಾಗ ತನಿಖೆ ಪ್ರಾರಂಭಿಸಿತ್ತು. ಪ್ರಕರಣದಲ್ಲಿ ಶೆಹಬಾಜ್ ಷರೀಫ್ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಸೆ.07 ರಂದು ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا