Urdu   /   English   /   Nawayathi

ನಿಂತಿದ್ದ ಕಂಟೇನರ್‌ಗೆ ಕಾರು ಢಿಕ್ಕಿ: ಇಬ್ಬರ ಸಾವು,ಇನ್ನಿಬ್ಬರಿಗೆ ಗಾಯ

share with us

ಇಟಾವಾ, ಉತ್ತರ ಪ್ರದೇಶ: 04 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆಗ್ರಾ - ಲಕ್ನೋ ಎಕ್ಸ್‌ಪ್ರೆಸ್‌ ವೇ ಯಲ್ಲಿ ರಸ್ತೆ ಬದಿ ನಿಂತುಕೊಂಡಿದ್ದ ಕಂಟೇನರ್‌ ಒಂದಕ್ಕೆ ಕಾರೊಂದು ಢಿಕ್ಕಿ ಹೊಡೆದ ಕಾರಣ ಕಾರಿನಲ್ಲಿದ್ದವರ ಪೈಕಿ ಇಬ್ಬರು ಮೃತಪಟ್ಟ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ಮೃತರನ್ನು ಭೂಪೇಂದ್ರ ಯಾದವ್‌ (30) ಮತ್ತು ರಾಜೇಶ್‌ ಯಾದವ್‌ (40) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬಿಹಾರದ ಮಧುಬನಿ ನಿವಾಸಿಗಳು. ಸ್ಥಳದಲ್ಲೇ ಇವರ ಸಾವು ಸಂಭವಿಸಿದೆ ಎಂದು ಎಸ್‌ಎಸ್‌ಪಿ ಅಶೋಕ್‌ ಕುಮಾರ್‌ ತ್ರಿಪಾಠಿ ತಿಳಿಸಿದ್ದಾರೆ.

ಗಾಯಾಳಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತ್ರಿಪಾಠಿ ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا