Urdu   /   English   /   Nawayathi

ಅಸ್ಸಾಂನಿಂದ ಮಯಾನ್ಮಾರ್ ಗೆ ಏಳು ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಸುಪ್ರೀಂ ಅನುಮತಿ

share with us

ನವದೆಹಲಿ: 04 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಭಾರತದಲ್ಲಿ ಅಕ್ರಮವಾಗಿ ನೆಲೆಯೂರಿದ್ದ ಏಳು ರೊಹಿಂಗ್ಯಾಗಳನ್ನು ಮತ್ತೆ ಮ್ಯಾನ್ಮಾರ್ ಗೆ ಗಡಿಪಾರು ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ರೊಹಿಂಗ್ಯಾ ಮುಸ್ಲಿಮರ ಅಕ್ರಮ ವಲಸೆ ಕುರಿತು ರಾಜಕೀಯ ವಲಯದಲ್ಲಿ ತಿಕ್ಕಾಟಗಳು ನಡೆಯುತ್ತಿರುವ ಈ ಹೊತ್ತಿನಲ್ಲೇ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.

ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ರೊಹಿಂಗ್ಯಾಗಳನ್ನು ಭಾರತ ಇಂದು ನ್ಯಾಯಾಲಯ ಆದೇಶದಂತೆ ಅವರ ತವರು ಮ್ಯಾನ್ಮಾರ್ ಗೆ ಗಡಿಪಾರು ಮಾಡಲಿದೆ. ವಿಶೇಷವೆಂದರೆ ಹೀಗೆ ಭಾರತದಿಂದ ರೊಹಿಂಗ್ಯಾಗಲನ್ನು ಗಡೀಪಾರು ಮಾಡುತ್ತಿರುವ ಪ್ರಕರಣ ಇದೇ ಮೊದಲಿನದಾಗಿದೆ. 

ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿದ್ದ ಏಳು ಮಂದಿ ರೊಹಿಂಗ್ಯಾಗಳನ್ನು 2012ರಲ್ಲಿ  ಸ್ಥಳೀಯ ಪೊಲೀಸರು ಬಂಧಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ಪೀಠವು ಇಂದು ರೊಹಿಂಗ್ಯಾಗಳ ಗಡೀಪಾರು ಆದೇಸವನ್ನು ನೀಡಿದೆ.

ಅಸ್ಸಾಂನ ಸಿಲ್ಚಾರ್‌ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿರುವ ಏಳು ಮಂದಿ ರೊಹಿಂಗ್ಯಾಗಳನ್ನು ಮಣಿಪುರದ ಗಡಿ ಮೂಲಕ ಇಂದು ಮ್ಯಾನ್ಮಾರ್ ಗೆ ಹಸ್ತಾಂತರ ಮಾಡಲಾಗುವುದು.ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا